
ಕಲಬುರಗಿ,ಮೇ.28-ಕಲಬುರಗಿ-ಅಫಲಪುರ ರಸ್ತೆಯ ಕೊಳ್ಳೂರ ಹತ್ತಿರ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಗುಲ್ಜಾರಬೇಗಂ ಎಂದು ಗುರುತಿಸಲಾಗಿದೆ.
ಮೇ.26 ರಂದು ರಾತ್ರಿ 8.30ರ ಸುಮಾರಿಗೆ ಇವರು ಮನೆಯ ಎದುರುಗಡೆ ರಸ್ತೆಯ ಆಚೆ ಇರುವ ಬೋರವೆಲ್‍ನಿಂದ ನೀರು ತುಂಬಿಕೊಂಡು ರಸ್ತೆ ದಾಟಿ ಬರುತ್ತಿದ್ದಾಗ ಅಫಜಲಪುರದಿಂದ ಕಲಬುರಗಿಗೆ ಕಡೆಗೆ ಹೋಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ.27 ರಂದು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.























