
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ 28: ತೆಲುಗು ಚಿತ್ರರಂಗದ ನಟಸಾರ್ವಭೌಮ, ನಂದಮೂರಿ ತಾರಕ ರಾಮರಾವ್ (ಎನ್ ಟಿಆರ್) ಅವರ 103ನೇ ಜಯಂತಿಯನ್ನು ಇಂದು
ನಗರದ ಕಾಕರ್ಲತೋಟದಲ್ಲಿ ಆಚರಿಸಲಾಯ್ತು.
ಇಲ್ಲಿನ ಎನ್ಟಿಆರ್ ಸರ್ಕಲ್ನಿಂದ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎನ್ ಟಿಆರ್ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಎನ್ ಟಿಆರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ಮೆರವಣಿಗೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ. ಸಿ. ಸುರೇಶ್ ಬಾಬು, ಎನ್ ಟಿಆರ್ ಅವರ ಸಾಮಾಜಿಕ ಸೇವೆ ಹಾಗೂ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸಿದರು. ಅನೇಕ ಮುಖಂಡರು ಇದ್ದರು.























