Home ಜಿಲ್ಲೆ ಧರ್ಮ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧವಾಗಿ ನಿಲ್ಲಬೇಕು

ಧರ್ಮ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧವಾಗಿ ನಿಲ್ಲಬೇಕು


ಗುಳೇದಗುಡ್ಡ,ಅ.೧೫:
ವಿಜಯದಶಮಿ ಅಂಗವಾಗಿ ಪಟ್ಟಣದಲ್ಲಿ ನಡೆಯಲಿರುವ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪಥಸಂಚಲನ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ಇಂದು ಭಾರತಮಾತೆ ಹಾಗೂ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.\
ಅವರು ಪಟ್ಟಣದ ಕೆಳಗಿನ ಮಾರ್ಕೆಟ್ ಸರ್ಕಲ್‌ನಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘ ಹಾಗೂ ವಿವಿಧ ಹಿಂದೂಪರ ಸಂಘಟನೆಗಳಿAದ ಹಮ್ಮಿಕೊಂಡಿದ್ದ ಭಾರತಮಾತೆ ಹಾಗೂ ಗೋ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟç ಹಾಗೂ ಧರ್ಮ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧವಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹಿಂದೂಗಳನ್ನು ಎಚ್ಚರಿಸಿ ಒಗ್ಗಟ್ಟಾಗಿಸುವ ಕೆಲಸ ಮಾಡುತ್ತವೆ. ಪ್ರತಿಯೊಬ್ಬರು ಪಟ್ಟಣದಲ್ಲಿ ನಡೆಯವ ವಿಜಯದಶಮಿ ಪಥಸಂಚಲನದಲ್ಲಿ ಭಾಗವಹಿಸಬೇಕು ಎಂದರು.


ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ತಾಲೂಕು ಕಾರ್ಯನಿರ್ವಾಹ ವಿಠ್ಠಲ ಪತ್ತಾರ, ಸಂಪತ್ತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಭುವನೇಶ ಪೂಜಾರ, ರವಿ ಅಂಗಡಿ, ಪೋಲಿಸಪ್ಪ ರಾಮದರ್ಗ, ಸಂಜೀವ ಕಾರಕೂನ, ಆದಪ್ಪ ಕಲಬುರ್ಗಿ, ಮಹೇಶ ಸೂಳಿಭಾವಿ, ಮಹಾದೇವ ಜಗತಾಪ, ಪ್ರಥಮೇಶ ವಾಘಮೋಡೆ, ರವಿ ಬೀಳಗಿ, ಪ್ರಭು ಕಳ್ಳಿಗುಡ್ಡ, ಆನಂದ ಗೋವಿಂದಕರ, ಸಂಗಮೇಶ ತಿಪ್ಪಾ, ಬಸವರಾಜ ಕಳ್ಳಿಗುಡ್ಡ, ರಾಘವ ತಿವಾಡಿ, ರಾಮು ಛಬ್ಬಿ, ಬಸು ಶೆಡ್ಲಿ, ಪರಶುರಾಮ ಸೂಳಿಭಾವಿ, ಸಂತೋಷ ಗಾಯದ, ದೀಪಕ ರಾಠೋಡ ಮತ್ತಿತರರು ಇದ್ದರು.