Home ಜಿಲ್ಲೆ ರಾಷ್ಟಿçÃಯ ವೀಕ್ಷಕರ ಭೇಟಿ

ರಾಷ್ಟಿçÃಯ ವೀಕ್ಷಕರ ಭೇಟಿ

ನವಲಗುಂದ,ಅ೧೨ : ತಾಲ್ಲೂಕಿನ ಮೊರಬ ಗ್ರಾಮದಲ್ಲಿರುವ ದಾನೇಶ್ವರಿ ಫಾರ್ಮ್ ಗೆ ಕೇಂದ್ರ ಪುರಸ್ಕöÈತ ಯೋಜನೆಗಳ ರಾಷ್ಟಿçÃಯ ವೀಕ್ಷಕರಾದ ಲಲಿತ ಜೋಶಿ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ದೇಶದ ಉತ್ತಮ ಲೈವ್ ಸ್ಟಾಕ್ ಗಳಲ್ಲಿ ದಾನೇಶ್ವರಿ ಫಾರ್ಮ್ ಕೂಡಾ ಒಂದಾಗಿದೆ ಎಂದು ಕುರಿ ಸಾಕಾಣಿಕೆ ಕುರಿತು ಪ್ರಶoಸೆ ವ್ಯಕ್ತಪಡಿಸಿದ ಅವರು ಕೇಂದ್ರ ಪುರಸ್ಕöÈತ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಧಾರವಾಡ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಎಸ್ ವಿ ಸತ್ತಿ ಮಾತನಾಡಿ ಮೊರಬ ಗ್ರಾಮದಲ್ಲಿ ರಾಷ್ಟೀಯ ಜಾನುವಾರು ಯೋಜನೆಯಿಂದ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಕುರಿ ಸಾಕಾಣಿಕೆ ಘಟಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೂ ಯುವಕರು ಕೃಷಿಯ ಜೊತೆಗೆ ಉಪ ಕಸಬಾಗಿ ಕುರಿ ಆಡು ಕೋಳಿ ಹೈನುಗಾರಿಕೆ ಮಾಡುವದರಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದರು

ದಾನೇಶ್ವರಿ ಫಾರ್ಮ್ ಮಾಲಕ ಮಂಜುನಾಥ ಕಾಲವಾಡ ಮಾತನಾಡಿ ಯುವಕರ ನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವ ಬದಲು, ಸ್ವಂತ ಊರಿನಲ್ಲೇ ಗೌರವಯುತವಾಗಿ ಬದುಕಲು ರಾಷ್ಟೀಯ ಜಾನುವಾರು (ಓಐಒ ) ಯೋಜನೆ ಲಾಭದಾಯಕವಾಗಿದೆ ಎಂದ ಅವರು ಯೋಜನೆ ಹಾಗೂ ಹೈನುಗಾರಿಕೆ ಲಾಭಾಂಶ ಕುರಿತು ಮಾಹಿತಿ ನೀಡಿದರು.ಇದೆ ವೇಳೆ ಲಲಿತ ಜೋಶಿ ಅವರನ್ನು ಸನ್ಮಾನಿಸಲಾಯಿತು

ನವಲಗುಂದ ಮುಖ್ಯ ಪಶುವೈಧ್ಯಾಧಿಕಾರಿ ಪ್ರಕಾಶ ಬೆನ್ನೂರ, ಶಿರೂರು ಪಶು ಚಿಕಿತ್ಸೆಲಯ ಹಿರಿಯ ಪಶುವೈಧ್ಯಾಧಿಕಾರಿ ಡಾ. ಎಸ್ ಕಿರಣಕುಮಾರ, ಮೊರಬ ಪಶು ಆಸ್ಪತ್ರೆಯ ಪಶುವೈಧ್ಯಾಧಿಕಾರಿ ಡಾ. ಸ್ಮಿತಾ ಸೇರಿದಂತೆ ಪಶು ಇಲಾಖೆಯ ಅಧಿಕಾರಿಗಳು ಇದ್ದರು.