
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೨: ನಗರದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶೋರೂಂನಲ್ಲಿ ಆಗಸ್ಟ್ ೧೪ರಿಂದ ನೈಸರ್ಗಿಕ ರತ್ನಗಳಿಂದ ರೂಪುಗೊಂಡ ವಿಶಿಷ್ಟ ಹಾಗೂ ಕಲಾತ್ಮಕ ಶ್ರೇಷ್ಠ ಆಭರಣಗಳ ಪ್ರದರ್ಶನ ನಡೆಯುತ್ತಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.
‘ನಾಯರಾ ಜೆಮ್ಸ್ ಸ್ಟೋನ್ಸ್’ ಚಾಲನೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಈ ವಿಶೇಷ ಪ್ರದರ್ಶನದಲ್ಲಿ ಪ್ರಕೃತಿಯ ಅತ್ಯುತ್ತಮ ರತ್ನಗಳಿಂದ ರೂಪುಗೊಂಡ ವೈವಿಧ್ಯಮಯ ಆಭರಣಗಳನ್ನು ಪ್ರದರ್ಶಿಸಲಾಗುತ್ತಿದೆ. ನೈಸರ್ಗಿಕ ರತ್ನಗಳ ಸೌಂದರ್ಯ, ಸಾಂಪ್ರದಾಯಿಕ ಕಲಾಕೌಶಲ ಹಾಗೂ ಆಧುನಿಕ ವಿನ್ಯಾಸಗಳ ಸಮನ್ವಯ ಈ ಸಂಗ್ರಹದ ವಿಶೇಷತೆಯಾಗಿದೆ.
ಚಿನ್ನದಲ್ಲಿ ಕೈಯಿಂದಲೇ ರೂಪಿಸಲ್ಪಟ್ಟ ಅಮೂಲ್ಯ ನೈಸರ್ಗಿಕ ರತ್ನಗಳಿಂದ ಅಲಂಕರಿಸಲಾದ ಪ್ರತಿಯೊಂದು ಆಭರಣವೂ ಸೂಕ್ಷ್ಮ ಕೆತ್ತನೆ, ಆಕರ್ಷಕ ವಿನ್ಯಾಸ ಹಾಗೂ ಸಮಕಾಲೀನ ಶೈಲಿಯ ವೈಶಿಷ್ಟ್ಯವನ್ನು ಹೊಂದಿದೆ. ಆಧುನಿಕ ಮಹಿಳೆಯರ ವಿಭಿನ್ನ ಅಭಿರುಚಿ, ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಈ ಆಭರಣಗಳನ್ನು ವಿನ್ಯಾಸಗೊಳಿಸಲಾಗಿದೆ.
ಈ ಪ್ರದರ್ಶನದಲ್ಲಿ ಸ್ನೇಹಾ ಪಾಟೀಲ, ಸ್ಮಿತಾ ಪಾಟೀಲ ಹಾಗೂ ನಂದಿನಿ ಎಸ್. ಸೇರಿದಂತೆ ಗಣ್ಯರು, ಶೋರೂಂ ಮುಖ್ಯಸ್ಥ ಎ.ಆರ್. ಶೇಖ್ ಅಬ್ದುಲ್ ಮಿರಾಜ್, ಅಸಿಸ್ಟಂಟ್ ಮ್ಯಾನೇಜರ್ ಫಜೀಲ್ ಅಹಮದ್, ಬಸವರಾಜ ಎಸ್. ಪೋಲೇಶಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸೇರಿದಂತೆ ಗ್ರಾಹಕರು ಹಾಗೂ ಆಹ್ವಾನಿತ ಅತಿಥಿಗಳು ಉಪಸ್ಥಿತರಿದ್ದರು.
ಪ್ರದರ್ಶನವು ನವೆಂಬರ್ ೨೨ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ರತ್ನಾಭರಣಗಳು ಹಾಗೂ ಇತರೆ ಆಭರಣಗಳ ಮೇಕಿಂಗ್ ಶುಲ್ಕದ ಮೇಲೆ ಶೇ.೨೫ರವರೆಗೆ ರಿಯಾಯಿತಿ ಪಡೆಯುವ ಅವಕಾಶವಿದೆ ಎಂದು ಸಂಸ್ಥೆ ತಿಳಿಸಿದೆ.































