Home ಜಿಲ್ಲೆ ೨೦೦ ಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ

೨೦೦ ಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಇಲ್ಲಿಯ ಗಾಂಧಿಗAಜನ ಅಡತ್ ಅಂಗಡಿಗಳಲ್ಲಿ ಧಾನ್ಯ ಶುಚಿಗೊಳಿಸುವ ಹಾಗೂ ಕಸ ಗುಡಿಸುವ ೨೦೦ಕ್ಕೂ ಹೆಚ್ಚು ಮಹಿಳೆಯರಿಗೆ ಗುರುವಾರ ಉಚಿತ ಸೀರೆ ವಿತರಿಸಲಾಯಿತು.
ಅಕ್ಕ ಪಡೆಯ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ ಸೀರೆ ವಿತರಣೆಗೆ ಚಾಲನೆ ನೀಡಿದರು.
ಸ್ಫೂರ್ತಿ ಧನ್ನೂರ ಅಧ್ಯಕ್ಷತೆಯಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಉತ್ತಮ ಕೆಲಸ ಮಾಡುತ್ತಿದೆ. ಆಹಾರ ಧಾನ್ಯ ಉದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಮಹಿಳಾ ಕಾರ್ಮಿಕರಿಗೆ ಸೀರೆ ವಿತರಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಗಾಂಧಿಗAಜನ ಅಡತ್ ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸೇವೆಯನ್ನು ಯಾರೂ ಗುರುತಿಸಿರಲಿಲ್ಲ. ಕ್ಲಬ್‌ನಿಂದ ಅವರಿಗೆ ಸೀರೆ ವಿತರಿಸಿ, ಗೌರವಿಸಿರುವುದು ಉತ್ತಮ ಬೆಳವಣಿಗೆ ಎಂದು ದಿ ಗ್ರೇನ್ ಆಯಿಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.
ಮಹಿಳಾ ಕಾರ್ಮಿಕರ ಪರಿಶ್ರಮವಿಲ್ಲದೆ ಗಾಂಧಿಗAಜನಲ್ಲಿ ಯಾವುದೇ ಚಟುವಟಿಕೆಗಳು ನಡೆಯಲಾರವು. ಹೀಗಾಗಿ ಸಮಾಜಕ್ಕೆ ಅವರ ಕೊಡುಗೆ ಪರಿಚಯಿಸಲು ಹಾಗೂ ಅವರನ್ನು ಗೌರವಿಸಲು ಸೀರೆ ವಿತರಣೆ ಮಾಡಲಾಗಿದೆ. ಕ್ಲಬ್‌ನಿಂದ ಇನ್ನೂ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಅಧ್ಯಕ್ಷೆ ಸ್ಫೂರ್ತಿ ಧನ್ನೂರ ಹೇಳಿದರು.
ಇನ್ನರ್ ವ್ಹೀಲ್ ಜಿಲ್ಲೆ ೩೧೬ ಅಧ್ಯಕ್ಷೆ ಮಂಜುಳಾ ಮೂಲಗೆ, ರೋಟರಿ ಕಲ್ಯಾಣ ಝೋನ್ ಮಾರ್ಗದರ್ಶಕ ಹಾವಶೆಟ್ಟಿ ಪಾಟೀಲ, ಜಿ.ಎನ್. ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ತರುಣ್ ಎಸ್. ನಾಗಮಾರಪಳ್ಳಿ ಮಾತನಾಡಿದರು.
ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಉಪಾಧ್ಯಕ್ಷ ಮಂಜುನಾಥ ಹೂಗಾರ, ಕಾರ್ಯದರ್ಶಿ ಅಭಿಷೇಕ ಚಿಂತಾಮಣಿ, ಸಹ ಕಾರ್ಯದರ್ಶಿ ಕೀರ್ತಿ ವಾಲೆ, ಮಾಜಿ ಅಧ್ಯಕ್ಷ ಪುನೀತ್ ಸಿಂಗ್, ಸದಸ್ಯರಾದ ಸಹನಾ ಪಾಟೀಲ, ಪೂಜಾ ಜಾರ್ಜ್ ಸ್ಯಾಮುಯೆಲ್, ಕಿರಣ್ ಸ್ಯಾಮುಯೆಲ್, ಬಸವಕುಮಾರ ಸುಲಗುಂಟೆ, ಆನಂದ ಕೊಟರಕಿ, ಶ್ರೀನಾಥ ನಾಗೂರೆ, ಡಾ. ಸಂಗಮೇಶ ವಡಗಾವೆ, ನಿಖಿಲ್ ಗಂಗಶೆಟ್ಟಿ, ಶಿವರುದ್ರ ಗಂಗಶೆಟ್ಟಿ, ಮಂಜುನಾಥ ಖೂಬಾ, ಪ್ರಶಾಂತ ಲಂಜವಾಡೆ, ದಿ ಗ್ರೇನ್ ಆಯಿಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ಕಾರ್ಯದರ್ಶಿ ಭಗವಂತ ಔದತ್‌ಪುರ, ಖಜಾಂಚಿ ಬಂಡೆಪ್ಪ ಗಡ್ಡೆ, ಪ್ರಮುಖರಾದ ಸೋಮನಾಥ ಗಂಗಶೆಟ್ಟಿ, ಗೋವಿಂದರಾವ್ ಬಿರಾದಾರ ಇದ್ದರು.
ಯೋಗೇಂದ್ರ ಯದಲಾಪುರೆ ನಿರೂಪಿಸಿದರು.