
ಹುಬ್ಬಳ್ಳಿ, ಅ೨೧: ಅರವಿಂದನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ವಿಜಯದಶಮಿಯಂದು ಶ್ರೀ ಹುಲಿಗೆಮ್ಮದೇವಿಯವರಿಗೆ ಮಹಾಭಿಷೇಕ ಗೈದು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮುತ್ತೆöÊದೆಯರಿಂದ ಅರಿಶಿಣ, ಕುಂಕುಮ, ಏರಿಸಿ ಉದಯಪೂಜೆ ನೆರವೇರಿಸಲಾಯಿತು. ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀ ಹುಲಿಗೆಮ್ಮದೇವಿಯವರ ಉತ್ಸವಮೂರ್ತಿಯನ್ನಿರಿಸಿ, ಬೆಳಿಗ್ಗೆ ಡೊಳ್ಳು ಮೇಳಗಳೊಂದಿಗೆ ಭವ್ಯ ಮೆರವಣಿಗೆಯು ಹೊರಟು ಅರವಿಂದನಗರದ ಕೆ.ಎಚ್.ಬಿ. ಕಾಲೊನಿಯಲ್ಲಿರುವ ಶ್ರೀ ಬನ್ನಿಮಹಾಂಕಾಳಿಯವರ ದೇವಸ್ಥಾನಕ್ಕೆ ಹೋಗಿ ಪೂಜೆ-ಕೈಂಕರ್ಯಗಳನ್ನು ನೆರವೇರಿಸಿ ಬನ್ನಿ ಮುಡಿದು ಪುನಃ ಮೂಲ ದೇವಸ್ಥಾನಕ್ಕೆ ಆಗಮಿಸಿತು. ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಯವರು ನವರಾತ್ರಿಯಲ್ಲಿ ಜರುಗಿದ `ಶ್ರೀ ದೇವಿ ಮಹಾತ್ಮೆ ಪುರಾಣ’ವನ್ನು ಮಂಗಲ ಮಾಡಿದರು.
ಮಾತೋಶ್ರೀ ಡಾ.ಹುಲಿಗೆಮ್ಮ ಪೋಸಾ ಅಮ್ಮನವರು ಆಶೀರ್ವಚನ ನೀಡಿದರು. ನಂತರ ಶ್ರೀ ದೇವಿಯವರಿಗೆ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ದಸರಾಮಹೋತ್ಸವ ಕಾರ್ಯಕ್ರಮಗಳು ಸಂಪನ್ನಗೊAಡವು.
ಕೆ.ಕೆ.ಮುಳಗುಂದ, ಲಕ್ಷö್ಮಣರಾವ್ ಸರ್ಯವಂಶಿ, ಬಸವಂತಪ್ಪ ಅನವಾಲ, ಗೋಪಾಲ ಶೆಲ್ಲಿಕೇರಿ, ಶಿವಾನಂದ ಕಲಾಲ, ಅರುಣಕುಮಾರ ಹೆಬ್ಬಳ್ಳಿ, ರವೀಂದ್ರ ದಾಗಿನದಾರ, ಕಿರಣ ಮೇತ್ರಾಣಿ, ಪ್ರಕಾಶ ಅರಗಂಜಿ, ಗುರುನಾಥ ಗಾಂವಕರ, ಪರಶುರಾಮ ಸುಳ್ಳದ, ಸಂದೀಪ ಬೇವಿನಕಟ್ಟಿ, ಯಲ್ಲಪ್ಪ ಕೊಸಗಿ, ದತ್ತು ರಾಯಬಾಗಿ, ಮಲ್ಲು ಅನಂತಪುರ, ಬಂಟಿ ಬಾಕಳೆ, ನಾರಿ ಹಬೀಬ, ಶ್ರೀಮತಿ. ಶಾರದಮ್ಮ ಕಸ್ತೂರಿ, ಯೋಗಿಣಿ ಶೆಲ್ಲಿಕೆರಿ, ವಿದ್ಯಾ ದಾಗಿನದಾರ, ರೂಪಾ ಮಗಜಿ, ರೇಖಾ ಸುಳ್ಳದ ಮತ್ತಿತರರು ಉಪಸ್ಥಿತರಿದ್ದರು.























