Home ಜಿಲ್ಲೆ ಕಲಬುರಗಿ “ಜ್ಞಾನಸೇತು” ಕೇಂದ್ರ ಮತ್ತು ದೃಷ್ಟಿದೋಷ ವಿದ್ಯಾರ್ಥಿಗಳಿಗಾಗಿ ವಿಶೇಷ ವೆಬ್‍ಸೈಟ್‍ಗೆ ಕುಲಪತಿ ಬಟ್ಟು ಸತ್ಯನಾರಾಯಣ ಚಾಲನೆ

“ಜ್ಞಾನಸೇತು” ಕೇಂದ್ರ ಮತ್ತು ದೃಷ್ಟಿದೋಷ ವಿದ್ಯಾರ್ಥಿಗಳಿಗಾಗಿ ವಿಶೇಷ ವೆಬ್‍ಸೈಟ್‍ಗೆ ಕುಲಪತಿ ಬಟ್ಟು ಸತ್ಯನಾರಾಯಣ ಚಾಲನೆ

ಕಲಬುರಗಿ,ಆ.14-“ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ, ಅತ್ಯುತ್ತಮ ಬಳಕೆದಾರರು, ಸ್ಕೋಪಸ್ ಸೂಚ್ಯಂಕದಲ್ಲಿ ಉನ್ನತ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ಪ್ರಾಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಅಭಿನಂದನೆ” ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕೇಂದ್ರ ಗ್ರಂಥಾಲಯದಲ್ಲಿ ಇಂದು ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್. ರಂಗನಾಥ ಅವರ 134ನೇ ಜಯಂತಿಯ ಅಂಗವಾಗಿ ಆಯೋಜಿಸಲಾದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಸಂದರ್ಭದಲ್ಲಿ 100 ಆಸನಗಳ ಆಧುನಿಕ ತಂತ್ರಜ್ಞಾನ ಹೊಂದಿದ ‘ಜ್ಞಾನ ಸೇತು’ ತರಬೇತಿ ಕೇಂದ್ರ ಹಾಗೂ ದೃಷ್ಟಿದೋಷ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ವೆಬ್‍ಸೈಟ್‍ನ್ನು ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿಗಳು, “ತರಗತಿಗಳಲ್ಲಿ ಕೇವಲ ವಿಷಯಜ್ಞಾನ ಸೀಮಿತವಾಗಿರುತ್ತದೆ, ಆದರೆ ಗ್ರಂಥಾಲಯಗಳಲ್ಲಿ ಜ್ಞಾನದ ಸಂಪತ್ತು ಅಡಗಿದೆ. ವ್ಯಕ್ತಿತ್ವ ವಿಕಸನ, ಜ್ಞಾನದ ವೃದ್ಧಿ, ಶೈಕ್ಷಣಿಕವಾಗಿ ಉನ್ನತಿ ಹಾಗೂ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಗ್ರಂಥಾಲಯದ ಬಳಕೆಗೆ ನಾವು ಹೆಚ್ಚಿನ ಸಮಯವನ್ನು ಮೀಸಲಿಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ- ಒಂದು ಚಂದಾದಾರಿಕೆ’ ಅಡಿಯಲ್ಲಿ 30ಕ್ಕೂ ಹೆಚ್ಚು ಪ್ರಕಾಶಕರ, 13,000ಕ್ಕೂ ಅಂತರರಾಷ್ಟ್ರೀಯ ಜರ್ನಲ್‍ಗಳಿವೆ. ಇ-ಗ್ರಂಥಾಲಯ ಸಂಪನ್ಮೂಲ, ವೈ- ಫೈ, ಟರ್ನಿಟಿನ್ ಕೃತಿಚೌರ್ಯ ಪತ್ತೆ ಸಾಧನ, ವ್ಯಾಕರಣ ಸುಧಾರಣಾ ಪರಿಕರಗಳು ಸೇರಿದಂತೆ ಅನೇಕ ಡಿಜಿಟಲ್ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೀವವಿಜ್ಞಾನ ನಿಕಾಯದ ಡೀನ್ ಪೆÇ್ರ. ಎನ್. ಸತ್ಯನಾರಾಯಣ ಅವರು ಮಾತನಾಡಿ, “ಪದ್ಮಶ್ರೀ ಡಾ. ಎಸ್. ಆರ್. ರಂಗನಾಥ ಅವರು ಗ್ರಂಥಾಲಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ
ಬದಲಾವಣೆ ತಂದ ಮಹನೀಯರು. ಅವರ ಜಯಂತಿಯ ಸಂದರ್ಭದಲ್ಲಿ ಗ್ರಂಥಾಲಯ ವಿಭಾಗವು 100 ಆಸನಗಳ ಆಧುನಿಕ ‘ಜ್ಞಾನ ಸೇತು’ ಕೇಂದ್ರ, ವಿಶೇಷ ವೆಬ್‍ಸೈಟ್ ಅನಾವರಣ ಮಾಡಿರುವುದು ಕೇವಲ
ದಿನಾಚರಣೆಯಲ್ಲ, ಅವರ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದಿರುವ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಗ್ರಂಥಾಲಯದ ಮುಖ್ಯಸ್ಥ ಡಾ. ಪಿ. ಎಸ್. ಕಟ್ಟಿಮನಿ, “ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಶೈಕ್ಷಣಿಕ ಜೀವನದ ಹೃದಯಭಾಗವೇ ಗ್ರಂಥಾಲಯ. ಗ್ರಂಥಾಲಯದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸುತ್ತಿರುವ ಕುಲಪತಿಗಳಿಗೆ ಅಭಿನಂದನೆ ಸಲ್ಲಿಸಿದರು. ‘ಜ್ಞಾನ ಸೇತು’ ಕೇಂದ್ರ ಮತ್ತು ನೂತನ ವೆಬ್‍ಸೈಟ್‍ನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಕೋಪಸ್ ಸೂಚ್ಯಂಕದಲ್ಲಿ ಉನ್ನತ ಗುಣಮಟ್ಟದ ಅತಿಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಶೇಷನಾಥ ಭೋಸಲೆ, ಸ್ಕೋಪಸ್ ಸೂಚ್ಯಂಕದಲ್ಲಿ ಉನ್ನತ ಗುಣಮಟ್ಟದ ಸಂಶೋಧನಾ ಲೇಖನಗಳ ಅತಿ ಹೆಚ್ಚು ಉಲ್ಲೇಖ ಪಡೆದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎನ್ ಸಂದೀಪ್, ಉತ್ತಮ ಬಳಕೆ ಮಾಡಿದ ವ್ಯವಹಾರ ಅಧ್ಯಯನದ ಪ್ರಾಧ್ಯಾಪಕ ಡಾ.ಶೈಲಜಾ ಎಸ್ ಕೋನೆಕ, ಅನೀಲರಾವ್ ಕಾಂಬಳೆ ಸೇರಿದಂತೆ ಅತಿಹೆಚ್ಚು ಬಳಕೆ ಮಾಡಿದ, ಪ್ರಕಟಣೆ ಮಾಡಿದ ಭೋದಕೇತರ ಸಿಬ್ಬಂದಿಗಳಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳನ್ನು ಗ್ರಂಥಾಲಯದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ರಾಜಕುಮಾರ ಕಲ್ಯಾಣಿ ನಿರೂಪಿಸಿದರು. ಪ್ರಕಾಶ್ ಎಸ್. ಎನ್. ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವು ವಂದೇಮಾತರಂ ಗೀತೆಯೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ
ಸಮಾಪ್ತಿಯಾಯಿತು.
ಈ ಸಂದರ್ಭದಲ್ಲಿ ಉಪ ಗ್ರಂಥಪಾಲಕರಾದ ಡಾ. ಸತೀಶ್ ತೋಟರ್, ಡಾ. ದೀಕ್ಷಿತ್, ಸಿಬ್ಬಂದಿಗಳಾದ ರಾಜೇಶ್ ದಾಸ್, ಬಸವರಾಜ ಯಾದವಾಡ, ನಿಂಗಣ್ಣ, ಸಾಗರ ಕಡಬೆ, ಸತೀಶ್ ಕುಮಾರ್, ಶಿವಕುಮಾರ್
ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.