
ಕಲಬುರಗಿ:ಜು.3: ದಕ್ಷಿಣ ಮತಕ್ಷೇತ್ರದಲ್ಲಿ ಬರುವ 12 ಜನ ಅಂಗವಿಕಲರಿಗೆ ಶಾಸಕರಾದ ಅಲ್ಲಂಪ್ರಭು ಪಟೀಲರು ಜಿಲ್ಲಾ ಡಿಂಎಫ್ ನಿಧಿಯಲ್ಲಿ ಖರೀದಿಸಿ ವಿತರಿಸಿದರು.
ಡೀಸಿ ಕಚೇರಿ ಆವರಣದಲ್ಲಿರುವ ಶಾಸಕರ ಕಚೇರಿ ಅಂಗಳದಲ್ಲಿ ಗುರುವಾರ ಸಜೆ ನಡೆದ ಸಮಾರಂಭದಲ್ಲಿ ಶಾಸಕ ಅಲ್ಲಂಪ್ರಭು ಪಾಟೀಲರು ಅರ್ಹ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು.
ತಮ್ಮ ಸರ್ಕಾರ ಬಂದಮೇಲೆ ಮೊದಲ ವರ್ಷ 35, ನಂತರದಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ 35 ವಾಹನಗಳನ್ನು ವಿತರಿಸಿದ್ದೇವು. ಇದೀಗ ವಿತರಿಸಿದ 12 ವಾಹನಗಳು ಸೇರಿದಂತೆ ಇದುವರೆಗೂ 82 ಅಂಗವಿಕಲರಿಗೆ ವಾಹನಗಳನ್ನು ನೀಡಿ ಅವರಿಗೆ ಬೆಂಬಲಿಸಲಾಗಿದೆ ಎಂದು ಶಾಸಕರು ನುಡಿದರು.
ಪಾಲಿಕೆ ವ್ಯಾಪ್ತಿಯ 55 ವಾರ್ಡ್ ಹಾಗೂ 28 ಹಲಳಿಗಳು ಸೇರಿದಂತೆ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ಎಲ್ಲಾ ಕಡೆಗಳಲ್ಲಿರುವ ಅಂಗವಿಕಲರಿಗೆ ಅನುಕೂಲವಾಗಿಸಲು, ಅವರು ವಾಹನದ ನೆರವಿನಿಂದ ತಮ್ಮ ದಿನದ ಕೆಲಸಗಳಲ್ಲಿ ತೊಡಗಲು ಅನುಕೂಲ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಉಳಿದ ?ಂಗವಿಕಲರಿಗೂ ವಾಹನಗಳನ್ನು ನೀಡಲಾಗುತ್ತದೆ.
ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಯಾರೂ ಅಂಗವಿಕಲರು ವಾಹನ ಇಲ್ಲದೆ ಹೊರಗೆ ಬರಬಾರದು. ಅರ್ಹರು ಹಾಗೂ ಕಾನೂನಿನಂತೆ ಅಂಗವೈಕಲ್ಯ ಪ್ರಮಾಣ ಹೊಂದಿದವರಿಗೆ ವಾಹನ ನೀಡಲು ತಾವು ಕ್ರಮ ಜರುಗಿಸೋದಾಗಿ ಅಲ್ಲಂಪ್ರಭು ಹೇಳಿದರು. ಅರ್ಹ ಇಬ್ಬರು ಅಂಗವಿಕಲರಿಗೆ ರಾಶಿ ಯಂತ್ರ ನೀಡಲಾಗುತ್ತಿದೆ ಎಂದು ಶಾಸಕರು ಹೇಳಿದರು.
ತಮಗೆ ತ್ರಿಚಕ್ರ ವಾಹನ ನೀಡಿರೋದು ಖುಷಿ ಕೊಟಟಿದೆ. ಇದು ತ್ರಿಚಕ್ರ ವಾಹನವಲ್ಲ, ಕಾರ್ ಎಂದು ತಾವು ಅರಿತು ಸಂತಸದಲ್ಲಿದ್ದೇವೆ ಎಂದು ವಾಹನ ಪಡೆದ ಫಲಾನುಭವಿಗಳು ಸಂತಸ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಲಾಲ್ ಅಹ್ಮದ್ ?ಬಂಬೆ ಶೇಠ್ ಹಾಗೂ ಕಾಂಗ್ರೆಸ್ ವಿವಿಧ ಹಂತದ ಮುಕಂಡರು ಹಾಜರಿದ್ದರು.






























