Home ಮುಖಪುಟ ಸುದ್ದಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೆ ಪಾಕ್‌ಗೆ ಪ್ರಯಾಣ

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೆ ಪಾಕ್‌ಗೆ ಪ್ರಯಾಣ

ಟ್ರಂಪ್ ಸುಳಿವು

ವಾಷಿಂಗ್ಟನ್, ಏ.೧೭- ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೆ ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ಪರಿಗಣಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆಗಳು ಬಹುತೇಕ ಅಂತಿಮಗೊಂಡಿವೆ. ಈ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದಿದ್ದಾರೆ.

ನೆವಾಡಾದಿಂದ ಲಾಸ್ ವೇಗಾಸ್‌ಗೆ ಹೋಗುವ ಮಾರ್ಗದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಪಾಕಿಸ್ತಾನವ ಶ್ಲಾಘಿಸಿದ್ದು ಮಾತುಕತೆಗಳನ್ನು ರಚನಾತ್ಮಕ ಎಂದು ಕರೆದಿದ್ದಾರೆ.

ಪಾಕಿಸ್ತಾನದ ಮಧ್ಯವರ್ತಿಗಳು “ತುಂಬಾ ಒಳ್ಳೆಯವರು” ಎಂದು ಹೇಳಿದ ಅವರು ” ತಾವು ಪಾಕಿಸ್ತಾನಕ್ಕೆ ಹೋಗುತ್ತೇನೆ ಅದು ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ಅಂತಿಮವಾದರೆ ಮಾತ್ರ ಎಂದು ಸ್ಪಷ್ಟಪಡಿಸಿದರು.

ಅಮೆರಿಕ ಮತ್ತು ಇರಾನ್ ಮುಂದಿನ ಸುತ್ತಿನ ಮಾತುಕತೆಯನ್ನು ಬಹುಶಃ ವಾರಾಂತ್ಯದಲ್ಲಿ ನಡೆಸುವ ಸಾಧ್ಯತೆಯಿದೆ. ಒಪ್ಪಂದದ ಬಗ್ಗೆ ಈ ಬಾರಿ ಆಶಾವಾದಿಗಳಾಗಿದ್ದು, ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತದೆ ಎಂದು ಹೇಳಿದ್ದಾರೆ.

ಅಮೆರಿಕ ಇರಾನಿಯನ್‌ರೊಂದಿಗೆ ‘ತುಂಬಾ ಚೆನ್ನಾಗಿ’ ವ್ಯವಹರಿಸುತ್ತಿದೆ. ಕದನ ವಿರಾಮವನ್ನು ವಿಸ್ತರಿಸುವ ಅಗತ್ಯವಿದೆಯೇ ಎಂದು ಖಚಿತವಿಲ್ಲ ಎಂದು ಹೇಳಿದ್ದಾರೆ.

ಈಗ ಇರಾನ್ ಮೇಲೆ ಹೆಚ್ಚು ಗಮನಹರಿಸಿದ್ದೇವೆ, ಅದನ್ನು ಪೂರ್ಣಗೊಳಿಸಲು ಸಾಧ್ಯವೇ ಎಂದು ನೋಡುತ್ತಿದ್ದೇವೆ, ಷೇರು ಮಾರುಕಟ್ಟೆ ಉತ್ತಮವಾಗಿದೆ, ತೈಲ ಬೆಲೆಗಳು ಕಡಿಮೆಯಾಗುತ್ತಿವೆ ಮತ್ತು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ಇರಾನ್‌ನ ಯುರೇನಿಯಂ ಪುಷ್ಟೀಕರಣದ ಬಗ್ಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ , ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ ಮತ್ತೊಮ್ಮೆ ಹೇಳಿದ್ದಾರೆ.
.
ಇರಾನ್ ಪರಮಾಣು ಶಸ್ತ್ರಾಸ್ತ್ರ ಪಡೆಯದಂತೆ ನೋಡಿಕೊಳ್ಳುವುದು ಆಡಳಿತದ ಪ್ರಮುಖ ಆದ್ಯತೆಯಾಗಿದೆ , ಆದರೆ ಶಾಂತಿ ಒಪ್ಪಂದಕ್ಕೆ ತಲುಪಲು ವಿಫಲವಾದರೆ ಹೊಸ ಹಗೆತನಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.