
ನಗರದ ಮಾವಳ್ಳಿ ಜೈನ್ ಸಂಘ ಹಾಗೂ ದೊಡ್ಡ ಮಾವಳ್ಳಿ ಗ್ರಾಮ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ಶ್ರೀ ಬಿಸಿಲು ಮಾರಮ್ಮ ದೇವಸ್ಥಾನದ ಆವರಣದಲ್ಲಿ ಇಂದು ನಡೆದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ರವರು ಉದ್ಘಾಟಿಸಿದರು. ಅಶೋಕ್ ಜೈನ್, ಜೀತೇಂದ್ರ ಕುಮಾರ್, ಡಾ. ಪ್ರಕಾಶ್, ಅಧ್ಯಕ್ಷ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.





















