ಕಲಬುರಗಿ: ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ ಮತ್ತು ಇಡೀ ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಕಾರ್ಮಿಕರು ನಡೆಸುತ್ತಿರುವ ಹೋರಾಟಗಳ ಮೇಲೆ ಉತ್ತರ ಪ್ರದೇಶ ಮತ್ತು ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರಗಳು ನಡೆಸುತ್ತಿರುವ ದಮನಕಾರಿ ಕ್ರಮಗಳನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಎಂ.ಬಿ.ಸಜ್ಜನ್, ಶಾಂತಾ ಘಂಟೆ, ನಾಗಯ್ಯಸ್ವಾಮಿ, ಗೌರಮ್ಮ ಪಾಟೀಲ, ಶೇಕಮ್ಮ ಕುರಿ ಸೇರಿದಂತೆ ಮತ್ತಿತರರು ಇದ್ದರು.