Home ಜಿಲ್ಲೆ ಕಲಬುರಗಿ ಸಿಮೆನ್ಸ್ ಕಂಪನಿಯ ತಂಡದಿಂದ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ, ಉದ್ದೇಶಿತ ಯೋಜನೆ ಕುರಿತು ಸುದೀರ್ಘ ಚರ್ಚೆ

ಸಿಮೆನ್ಸ್ ಕಂಪನಿಯ ತಂಡದಿಂದ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ, ಉದ್ದೇಶಿತ ಯೋಜನೆ ಕುರಿತು ಸುದೀರ್ಘ ಚರ್ಚೆ

ಕಲಬುರಗಿ/ಬೆಂಗಳೂರು,ಏ.17-ಭಾರತದಲ್ಲಿ 100 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಜಾಗತಿಕ ಮಟ್ಟದ ಮೆಡ್‍ಟೆಕ್ ಕಂಪನಿ ‘ಸೀಮೆನ್ಸ್ ಹೆಲ್ತಿನಿಯರ್ಸ್’ ತಂಡ ಬೆಂಗಳೂರಿನಲ್ಲಿ ಐಟಿ/ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿತು.
ಈ ಭೇಟಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಖ&ಆ), ಉತ್ಪಾದನೆ ಮತ್ತು ತರಬೇತಿ ವಿಭಾಗಗಳನ್ನು ಒಂದೇ ಸೂರಿನಡಿ ತರಲಿರುವ ನೂತನ ಕ್ಯಾಂಪಸ್ ಕುರಿತು ಅವರು ಸಚಿವರಿಗೆ ಮಾಹಿತಿ ನೀಡಿದರು.
ಬೆಂಗಳೂರು ಈಗಾಗಲೇ ಅವರ ನಾಲ್ಕು ಜಾಗತಿಕ ನಾವೀನ್ಯತೆ ಕೇಂದ್ರಗಳಲ್ಲಿ ಒಂದಾಗಿದ್ದು, ಜಾಗತಿಕ ಖ&ಆ ಹಾಗೂ ಎಂಜಿನಿಯರಿಂಗ್ ಪ್ರತಿಭೆಗಳಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ.
ಕೌಶಲ್ಯಾಭಿವೃದ್ಧಿ, ಜಂಟಿ ಇನ್‍ಕ್ಯೂಬೇಶನ್ ಹಾಗೂ ಜೀವವಿಜ್ಞಾನ, ಹೆಲ್ತ್‍ಟೆಕ್ ಮತ್ತು ವೈದ್ಯಕೀಯ ಉತ್ಪನ್ನಗಳಿಗಾಗಿ ಮುಂಬರಲಿರುವ ನಮ್ಮ ಶ್ರೇಷ್ಠತಾ ಕೇಂದ್ರಗಳಲ್ಲಿ ಸಹಯೋಗ ಹೊಂದುವ ಅವಕಾಶಗಳ ಬಗ್ಗೆ ಸಚಿವರು ತಂಡದೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
“‘ಡೀಪ್‍ಟೆಕ್ ದಶಕ’ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕದ ಸ್ಟಾರ್ಟ್‍ಅಪ್ ಇಕೋ ಸಿಸ್ಟಂನೊಂದಿಗೆ ಕಂಪೆನಿಯು ಹೇಗೆ ಹೆಚ್ಚು ನಿಕಟವಾಗಿ ತೊಡಗಿಸಿಕೊಳ್ಳಬಹುದು ಎಂಬುದರ ಕುರಿತು ಸಮಾಲೋಚನೆ ನಡೆಸಲಾಯಿತು.
“ನಮ್ಮ ಪ್ರಬಲ ಪ್ರತಿಭಾ ಸಂಪನ್ಮೂಲ ಮತ್ತು ನಾವೀನ್ಯತೆ ಇಕೋ ಸಿಸ್ಟಂ ಬೆಂಬಲದೊಂದಿಗೆ ಜಾಗತಿಕ ನಾಯಕರು ಕರ್ನಾಟಕದಲ್ಲಿ ತಮ್ಮ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಿಸುವುದನ್ನು ನೋಡುವುದು ಆಶಾದಾಯಕವಾಗಿದೆ” ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.