ಭಾರತದ ಜನಗಣತಿ ಕುರಿತಂತೆ ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ರವರು ಇಂದು ಚಾರ್ಜ್ ಕಚೇರಿಗೆ ಭೇಟಿ ನೀಡಿ ಗಣತಿದಾರರು ಮತ್ತು ಮೇಲ್ವಿಚಾರಕರು ಪ್ರತಿಮನೆಗೆ ಭೇಟಿ ಪರಿಶೀಲನೆ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಈಶ್ವರ್ ಎಸ್. ರಾಯುಡು ಜೆ.ಪಿ. ನಗರ ಚಾರ್ಜ್ ಅಧಿಕಾರಿ, ಎಇಇ ಮನುಗೌಡ, ಸಹಾಯಕ ಚಾರ್ಜ್ ಅಧಿಕಾರಿ ಆಂಜನೇಯ ಇದ್ದರು.