Home ಮುಖಪುಟ ಸುದ್ದಿ ಹರಿವಂಶ್ ರಾಜ್ಯಸಭೆ ಉಪಸಭಾಪತಿ

ಹರಿವಂಶ್ ರಾಜ್ಯಸಭೆ ಉಪಸಭಾಪತಿ

ನವದೆಹಲಿ, ಏ. ೧೭- ರಾಜ್ಯಸಭೆಯ ಉಪಸಭಾಪತಿಯಾಗಿ ಹರಿವಂಶ ನಾರಾಯಣಸಿಂಗ್ ಅವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಇಂದು ಆಯ್ಕೆಯಾಗಿದ್ದಾರೆ.


ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಹರಿವಂಶ್ ನಾರಾಯಣ ಸಿಂಗ್ ಅವರ ಆಯ್ಕೆ ಅವಿರೋಧವಾಯಿತು.


ರಾಜ್ಯಸಭೆಯ ಉಪಸಭಾಪತಿಯಾಗಿದ್ದ ಹರಿವಂಶ ನಾರಾಯಣಸಿಂಗ್ ಅವರ ಅವಧಿ ಏಪ್ರಿಲ್ ೯ ರಂದು ಮುಗಿದಿತ್ತು. ನಂತರ ಅವರನ್ನು ಮತ್ತೆ ರಾಜ್ಯಸಭೆಗೆ ನಾಮಕರಣ ಮಾಡಲಾಗಿತ್ತು. ರಾಜ್ಯಸಭೆಯ ಸಭಾಪತಿಗಳಾದ ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು ರಾಜ್ಯಸಭೆಗಳ ಕಪಾಲಗ ೭ರ ಅಡಿಯಲ್ಲಿ ಚುನಾವಣೆ ದಿನಾಂಕವನ್ನು ನಿಗದಿಪಡಿಸಿ ಇಂದು ೧೨ ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು.


ವಿರೋಧ ಪಕ್ಷಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಹಾಗಾಗಿ ಉಪಸಭಾಪತಿಯಾಗಿ ಹರಿವಂಶ ನಾರಾಯಣ ಸಿಂಗ್ ಅವರು ಅವಿರೋಧವಾಗಿ ಆಯ್ಕೆಯಾದರು.


ರಾಜ್ಯಸಭೆಯ ಸಭಾನಾಯಕ ಜೆ.ಪಿ. ನಡ್ಡಾ ಅವರು ಹರಿವಂಶ ನಾರಾಯಣಸಿಂಗ್ ಅವರನ್ನು ಉಪಸಭಾಪತಿಯನ್ನಾಗಿ ಆಯ್ಕೆ ಮಾಡುವ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದ್ದು, ಸದನ ಧ್ವನಿ ಮತದಿಂದ ಇದನ್ನು ಅಂಗೀಕರಿಸಿತು. ನಂತರ ಸಭಾಪತಿಗಳನ್ನು ಹರಿವಂಶ ನಾರಾಯಣ ಸಿಂಗ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.


ಹರಿವಂಶ ನಾರಾಯಣಸಿಂಗ್ ಅವರು ಈಗಾಗಲೇ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಈಗ ಮೂರನೇ ಬಾರಿ ಮತ್ತೆ ರಾಜ್ಯಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.