Home ಜಿಲ್ಲೆ ಕಲಬುರಗಿ ಹೆಲ್ಮೆಟ್ ಇಲ್ಲದವರಿಗೆ ಸ್ಥಳದಲ್ಲಿಯೇ ಖರೀದಿಸಲು ಸೂಚಿಸಿದ ಟ್ರಾಫಿಕ್ ಪೊಲೀಸ್

ಹೆಲ್ಮೆಟ್ ಇಲ್ಲದವರಿಗೆ ಸ್ಥಳದಲ್ಲಿಯೇ ಖರೀದಿಸಲು ಸೂಚಿಸಿದ ಟ್ರಾಫಿಕ್ ಪೊಲೀಸ್

ಕಲಬುರಗಿ,ಜೂ 12 : ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದ ನೂರಕ್ಕೂ ಅಧಿಕ ದ್ವಿಚಕ್ರ ವಾಹನ ಸವಾರರನ್ನು ಇಂದು ತಡೆದು ನಿಲ್ಲಿಸಿದ ಸಂಚಾರಿ ಪೊಲೀಸರು ಅವರಿಗೆ ಯಾವುದೇ ದಂಡ ವಿಧಿಸಲಿಲ್ಲ.
ಆದರೆ,ಹೆಲ್ಮೆಟ್ ಇಲ್ಲದವರು ಸ್ಥಳದಲ್ಲಿಯೇ ಖರೀದಿಸಿ, ಮನೆಯಲ್ಲಿ ಹೆಲ್ಮೆಟ್ ಇಟ್ಟು ಬಂದವರು ಮನೆಗೆ ಹೋಗಿ ತೆಗೆದುಕೊಂಡು ಬನ್ನಿ ಎಂದು ಸೂಚಿಸಿದರು.
ಅದರಂತೆ ಹೆಲ್ಮೆಟ್ ಖರೀದಿಸದೇ ಇದ್ದ ಹಲವರು ಸ್ಥಳದಲ್ಲಿಯೇ ಖರೀದಿಸಿದರು. ಮನೆಯಲ್ಲಿಟ್ಟವರು ಮನೆಗೆ ತೆರಳಿದರು. ಈ ವಿನೂತನ ಪ್ರಯೋಗ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಸಂಚಾರಿ ಎಸಿಪಿ ಡಿ.ಟಿ ಪ್ರಭು , ಪಿಎಸ್‍ಐಗಳಾದ ಭಾರತಿಬಾಯಿ ಧನ್ನಿ ಮತ್ತು ಅರ್ಜುನಸಿಂಗ್ ಠಾಕೂರ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.