Home ಜಿಲ್ಲೆ ಫುಟ್‌ಬಾಲ್‌ನಲ್ಲಿ ರಾಜ್ಯಕ್ಕೆ ತೃತೀಯ: ಜಾಸ್ಮಿನ್ ತಂಡಕ್ಕೆ ಸನ್ಮಾನ

ಫುಟ್‌ಬಾಲ್‌ನಲ್ಲಿ ರಾಜ್ಯಕ್ಕೆ ತೃತೀಯ: ಜಾಸ್ಮಿನ್ ತಂಡಕ್ಕೆ ಸನ್ಮಾನ

ಬೀದರ್: ದಸರಾ ಪ್ರಯುಕ್ತ ಮೈಸೂರಿನಲ್ಲಿ ಆಯೋಜಿಸಿದ್ದ ದಸರಾ ಸಿಎಂ ಕಪ್ ರಾಜ್ಯಮಟ್ಟದ ಫುಟ್‌ಬಾಲ್ ಟೂರ್ನಮೆಂಟ್‌ನಲ್ಲಿ ತೃತೀಯ ಸ್ಥಾನ ಪಡೆದÀ ಬೀದರನ ಜಾಸ್ಮಿನ್ ಕಾಲೇಜು ಫುಟ್‌ಬಾಲ್ ತಂಡವನ್ನು ನಗರದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತಂಡದ ಆಟಗಾರರನ್ನು ಸನ್ಮಾನಿಸಿ, ಪ್ರಮಾಣ ಪತ್ರ ನೀಡಿದರು.
ಶಾಸಕ ರಹೀಂಖಾನ್, ಬಿಡಿಎ ಅಧ್ಯಕ್ಷ ವಿನೋದಕುಮಾರ ಅಪ್ಪೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಇತರರು ಇದ್ದರು.