
ಕಲಬುರಗಿ,ಅ.15: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಭೌತಶಾಸ್ತ್ರ ವಿಭಾಗವು ಇತ್ತೀಚೆಗೆ ಬೋಧನೆ ಮತ್ತು ಸಂಶೋಧನೆಯನ್ನು ಬಲಪಡಿಸಲು ನಾಲ್ಕು ನೂತನ ಸೌಲಭ್ಯಗಳಾದ- ಕಂಪ್ಯೂಟರ್ ಪ್ರಯೋಗಾಲಯ, ಆಪೆÇ್ಟಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಸಾಧನಗಳ ಪ್ರಯೋಗಾಲಯ, ಉಪಕರಣ ಪ್ರಯೋಗಾಲಯ ಮತ್ತು ವಿಭಾಗದ ಕಚೇರಿಯನ್ನು ಉದ್ಘಾಟಿಸಿತು.
ಭೌತಶಾಸ್ತ್ರ ವಿಭಾಗದಲ್ಲಿ ನೂತನ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಉದಯೋನ್ಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಸವಾಲುಗಳನ್ನು ಎದುರಿಸಲು ಹಾಗೂ ಸಂಶೋಧನೆ, ಕೈಗಾರಿಕೆ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿನ ಅವಕಾಶಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ವಿಶ್ವವಿದ್ಯಾಲಯದ ಮೂಲಸೌಕರ್ಯವನ್ನು ನಿರಂತರವಾಗಿ ಉನ್ನತೀಕರಿಸುವ ಅಗತ್ಯವಿದೆ ಎಂದರು. ಈ ಗುರಿ ಸಾಧನೆಯಲ್ಲಿ ಆಧುನಿಕ ಪ್ರಯೋಗಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಜ್ಞಾನ, ತಾಂತ್ರಿಕ ಸಾಮಥ್ರ್ಯ, ಕಂಪ್ಯೂಟರ್ ಆಧಾರಿತ ಕೌಶಲ್ಯಗಳು ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯವನ್ನು ಬೆಳೆಸುವ ಮಹತ್ವವನ್ನು ಒತ್ತಿ ಹೇಳಿದರು.
ಪ್ರಭಾರ ಕುಲಸಚಿವ ಪೆÇ್ರ. ಬಸವರಾಜ್ ಎಂ. ಕುಬಕಡ್ಡಿ ಅವರು ಕ್ವಾಂಟಮ್ ತಂತ್ರಜ್ಞಾನ, ವಸ್ತು ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣ ತಂತ್ರಜ್ಞಾನಗಳ ಪ್ರಗತಿಯಲ್ಲಿ ಮೂಲಭೂತ ವಿಜ್ಞಾನಗಳ ಮಹತ್ವವನ್ನು ವಿವರಿಸಿದರು. ಸುಸ್ಥಿರ ನಾವೀನ್ಯತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾಗಿ ವೈಜ್ಞಾನಿಕ ಸಂಶೋಧನೆ ಹಾಗೂ ತಂತ್ರಜ್ಞಾನದ ಅನ್ವಯಿಕತೆಗೆ ಆದ್ಯತೆ ನೀಡುವಂತೆ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಕರೆ ನೀಡಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಭೌತಿಕ ವಿಜ್ಞಾನಗಳ ನಿಕಾಯದ ಡೀನ್ ಪೆÇ್ರ. ರಾಜೀವ್ ಶೇಷ ಜೋಶಿ ಅವರು, ಹೊಸ ಸೌಲಭ್ಯಗಳು ಪ್ರಾಯೋಗಿಕ ತರಬೇತಿ, ಗಣಕಯಂತ್ರ ಆಧಾರಿತ ಕಲಿಕೆ, ಪ್ರಯೋಗಾಧಾರಿತ ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ನೆರವಾಗಲಿವೆ ಎಂದು ಹೇಳಿದರು. ಈ ಪ್ರಯೋಗಾಲಯಗಳು ವೈಜ್ಞಾನಿಕ ಪೆÇ್ರೀಗ್ರಾಮಿಂಗ್, ಸಿಮ್ಯುಲೇಶನ್, ದತ್ತಾಂಶ ವಿಶ್ಲೇಷಣೆ, ಆಪೆÇ್ಟಎಲೆಕ್ಟ್ರಾನಿಕ್ ವಸ್ತುಗಳ ಸಂಶೋಧನೆ ಹಾಗೂ ಉಪಕರಣ ಆಧಾರಿತ ಅಧ್ಯಯನಗಳಿಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಪರೀಕ್ಷಾ ನಿಯಂತ್ರಣಾಧಿಕಾರಿ ಪೆÇ್ರ. ಭರತ್ ಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪೆÇ್ರ. ರಾಜೀವ್ ಶೇಷ ಜೋಶಿ ಸ್ವಾಗತಿಸಿದರು, ಡಾ. ಮಾಯಾರಾಣಿ ಎಂ. ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪೆÇ್ರ.ದೀಪಕ್ ಸ್ಯಾಮ್ಯುಯೆಲ್, ಪೆÇನ್ನಂ ಆಂಜನೇಯುಲು, ಡಾ.ಸುಚಿಸ್ಮಿತಾ ಸಾಹೂ, ಡಾ.ನರಸಿಂಹರಾಜು, ಡಾ.ಮಾಯಾರಾಣಿ ಎಂ., ಪೆÇ್ರ.ಎಂ.ವಿ.ಎನ್.ಅಂಬಿಕಾ ಪ್ರಸಾದ್, ಪೆÇ್ರ.ಪಲ್ಲೆಪೆÇೀಗು ರಾಘವಯ್ಯ, ಪೆÇ್ರ.ಜಿ.ಜನಾರ್ದನ ರೆಡ್ಡಿ, ಡಾ.ಎನ್.ಸಂದೀಪ್, ಡಾ.ವಿನೋದ್ ಕುಮಾರ್ ತಾಂಡೂರ್ಕರ್,ಮಂಜುನಾಥ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮವು ವಂದೇ ಮಾತರಂನೊಂದಿಗೆ ಪ್ರಾರಂಭವಾಯಿತು ಮತ್ತು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.























