Home ಜಿಲ್ಲೆ ಕಲಬುರಗಿ ಸಿಡಿಲಿಗೆ ಕಣಕಿ ಬಣವೆ ಭಸ್ಮ

ಸಿಡಿಲಿಗೆ ಕಣಕಿ ಬಣವೆ ಭಸ್ಮ

ಚಿತ್ತಾಪುರ,ಮೇ.28-ತಾಲೂಕಿನ ಕರದಾಳ ಗ್ರಾಮದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸುರಿದ ಗುಡುಗು ಸಹಿತ ಭಾರೀ ಗಾಳಿ ಮಳೆಯ ನಡುವೆ ಕಣಕಿ ಬಣವೆಗೆ ಸಿಡಿಲು ಬಡಿದು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಗ್ರಾಮದ ಸಿದ್ದಣ್ಣ ಶರಣಪ್ಪ ಕೊಟ್ರಿಕಿ ಅವರ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಕಣಕಿ ಬಣವೆಗೆ ಬೆಳಿಗ್ಗೆ ಸುಮಾರು 4 ಗಂಟೆ ಸುಮಾರಿಗೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ.
ಮಳೆಯ ನಡುವೆಯೂ ಕಣಕಿ ಬಣವಿ ಭಾರೀ ಪ್ರಮಾಣದಲ್ಲಿ ಹೊತ್ತಿ ಉರಿದಿದೆ. ಕೆಲವು ದಿನಗಳ ಹಿಂದೆ ಹೊಲದಲ್ಲಿದ್ದ ಜೋಳದ ರಾಶಿಯನ್ನು ಕಟ್ಟಿ ಕಣಕಿ ಬಣವಿಯಾಗಿ ಸಂಗ್ರಹಿಸಲಾಗಿತ್ತು. ಸಿಡಿಲಿನ ಪರಿಣಾಮ ಸಂಪೂರ್ಣ ಬಣವಿ ಸುಟ್ಟುಹೋಗಿದೆ.