Home ಜಿಲ್ಲೆ ದಸರಾ ಕ್ರೀಡಾಕೂಟ ನಾಡಿನ ಹೆಮ್ಮೆ

ದಸರಾ ಕ್ರೀಡಾಕೂಟ ನಾಡಿನ ಹೆಮ್ಮೆ


ಗದಗ,ಅ.೧೪: ನಾಡಹಬ್ಬ ದಸರಾ ನಿಮಿತ್ತವಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜ್ಯದ ೪೫೦೦ ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಸಿ.ಎಂ. ಕಪ್ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ನಾಡಿನ ಕೀರ್ತಿಯನ್ನು ದೇಶದಾದ್ಯಂತ ಪಸರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಈ ವರ್ಷದ ಮೈಸೂರು ದಸರಾ ಉದ್ಘಾಟಕರಾದ ಕೊಪ್ಪಳ ಗವಿಮಠ ಸಂಸ್ಥಾನದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.


ಅವರು ಮೈಸೂರಿನ ಚಾಮುಂಡಿ ವಿಹಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ಮೊದಲಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಕಲಬುರ್ಗಿ ವಿಭಾಗಗಳ ಮಧ್ಯ ನಡೆದಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಸಂತೋಷದಿAದ ವೀಕ್ಷಿಸಿ, ಅಥ್ಲೆಟಿಕ್ ಸಿಂಥೆಟಿಕ್ ಅಂಕಣಕ್ಕೆ ಆಗಮಿಸಿ ಮಹಿಳೆಯರ ಹಾಗೂ ಪುರುಷರ ೪೦೦ ಘಿ ೪ ರಿಲೇ ವೀಕ್ಷಿಸಿ ಬಹುಮಾನ ವಿತರಿಸಿದರು. ನಂತರ ಜಿಲಾ ?ಲಕ್ರೀಡಾಂಗಣದ ಆವರಣದಲ್ಲಿರುವ ಕುಸ್ತಿಮನೆಗೆ ಆಗಮಿಸಿ ದೇಸಿ ಆಟ ಮಕ್ಕಳ ಕುಸ್ತಿಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಗದಗಿನ ಚಿಕ್ಕೆನಕೊಪ್ಪೆಮಠದ ಶಿವಶಾಂತ ವೀರಶ್ರೀಗಳು, ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ದಸರಾ ಕ್ರೀಡಾ ಉಪಸಮಿತಿ ಕಾರ್ಯಾಧ್ಯಕ್ಷರಾದ ಡಾ. ಜಿತೇಂದ್ರಶೆಟ್ಟಿ, ಜಂಟಿನಿರ್ದೇಶಕರಾದ ಸುಭಾಷ್ ಚಂದ್ರ, ಉಪನಿರ್ದೇಶಕರಾದ ಎಂ.ಸಿ. ರಮೇಶ್, ಸಹಾಯಕ ನಿರ್ದೇಶಕರುಗಳಾದ ಮಂಜುನಾಥಸ್ವಾಮಿ, ಡಾ. ಶರಣು ಗೋಗೇರಿ, ವಿಠ್ಠಲ್ ಜಾಬ್ಗೌಡರ್‌ಇರೇಶ್ ನಾಯಕ್, ತರಬೇತುದಾರರಾದ ವಿಜಯಕೃಷ್ಣ, ವಿನೋದ್ ಕುಮಾರ್ ಸೇರಿದಂತೆ ಹಲವಾರು ಅಧಿಕಾರಿಗಳು ತರಬೇತುದಾರರು ಸೇರಿದಂತೆ ಸಾವಿರಾರು ಕ್ರೀಡಾಪಟುಗಳು ಉಪಸ್ಥಿತರಿದ್ದರು.