Home ಕ್ರೈಂ ಸುದ್ದಿಗಳು ದೇವಸ್ಥಾನದ ಬೀಗ ಮುರಿದು ಕಳ್ಳತನ..!ಮುಧೋಳ ಪೊಲೀಸರ ಚಾಕಚಕ್ಯ ಕಾರ್ಯಾಚರಣೆ : 6 ಲಕ್ಷಕ್ಕೂ ಅಧಿಕ ಮೌಲ್ಯದ...

ದೇವಸ್ಥಾನದ ಬೀಗ ಮುರಿದು ಕಳ್ಳತನ..!ಮುಧೋಳ ಪೊಲೀಸರ ಚಾಕಚಕ್ಯ ಕಾರ್ಯಾಚರಣೆ : 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ

ಮುಧೋಳ:ಮೇ.28:ತಾಲೂಕಿನ ಬಿದರಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಮುಧೋಳ ಪೆÇಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಭೇದಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಶಿವಾಜಿ ವೃತ್ತದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೆÇಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ದೇವಸ್ಥಾನ ಕಳ್ಳತನದ ರಹಸ್ಯ ಬಯಲಾಗಿದೆ. ಬಿದರಿ ಗ್ರಾಮದ ನಿವಾಸಿ ವಸಂತ ಮಾದರ (37) ಎಂಬಾತನೇ ಆರೋಪಿಯಾಗಿದ್ದು, ದುರ್ಗಾದೇವಿ ದೇವಸ್ಥಾನದ ಗರ್ಭಗುಡಿಯ ಬೀಗ ಮುರಿದು ಒಳನುಗ್ಗಿ ದೇವಿಯ ಮೂರ್ತಿಯ ಮೇಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವುದಾಗಿ ಪೆÇಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಒಟ್ಟು 6.09 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 32 ಗ್ರಾಂ ತೂಕದ 4.64 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 500 ಗ್ರಾಂ ತೂಕದ 1.42 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ 3 ಸಾವಿರ ರೂ. ಮೌಲ್ಯದ ತಾಮ್ರದ ಕೊಡ ಸೇರಿವೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಹಾಗೂ ಡಿವೈಎಸ್‍ಪಿ ಸಯ್ಯದ್ ರೋಷನ್ ಜಮೀರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ. ನಾಗರೆಡ್ಡಿ ಮತ್ತು ಪಿಎಸ್‍ಐ ಅಜೀತಕುಮಾರ ಹೊಸಮನಿ ನೇತೃತ್ವದ ಪೆÇಲೀಸ್ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ.
ಪ್ರಕರಣದ ತನಿಖೆಯಲ್ಲಿ ಕ್ರೈಂ ಪಿಎಸ್‍ಐ ಪಿ.ಎಸ್. ಮುರನಾಳ, ಪೆÇ್ರಬೆಷನರಿ ಪಿಎಸ್‍ಐ ರಮೇಶ್ ಬಿಳಗುಂಡಿ, ಆರ್.ಬಿ. ಕಟಗೇರಿ, ಬಿ.ಡಿ. ಕುರಿ, ದಾದಾಪೀರ್ ಅತ್ತಾರ, ಎಚ್.ಜೆ. ಮಾದರ, ಎಂ.ಬಿ. ದಳವಾಯಿ ಹಾಗೂ ಎಂ.ಎಲ್. ಒಡೆಯರ ಸೇರಿದಂತೆ ಹಲವು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಕರಣವನ್ನು ಭೇದಿಸಿದ ಪೆÇಲೀಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿ, ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.