
ಹೊಸದೆಹಲಿ.ಜೂ೨೯: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಂಡಳಿಗೆ ಭಕ್ತರು ನೀಡಿದ ದೇಣಿಗೆ ಹಣ ಹಾಗೂ ಆಭರಣಗಳ ದುರುಪಯೋಗ ಮತ್ತು ಕಳವು ಪ್ರಕರಣದ ಕುರಿತು ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಂ. ಎಂ. ಸುಂದ್ರೇಶ್ ಮತ್ತು ಶೀಲ್ ನಗು ಅವರನ್ನೊಳಗೊಂಡ ರಜಾಕಾಲದ ಪೀಠದ ಮುಂದೆ ವಕೀಲರಾದ ಅಜಯ್ ಕುಮಾರ್ ರಾಯ್ ಮತ್ತು ದಿನೇಶ್ ಕುಮಾರ್ ಯಾದವ್ ಅವರು ಅರ್ಜಿಯನ್ನು ಉಲ್ಲೇಖಿಸಿ, ತುರ್ತು ವಿಚಾರಣೆಗೆ ಕೋರಿದರು. ಈ ವೇಳೆ ಪೀಠವು, “ಈ ಪ್ರಕರಣದಲ್ಲಿ ಅಂತಹ ತುರ್ತು ಪರಿಸ್ಥಿತಿ ಏನಿದೆ?” ಎಂದು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲರು, “ರಾಜ್ಯ ಸರ್ಕಾರವು ಈ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ವಿವರಿಸಲು ಯತ್ನಿಸಿದರಾದರೂ, ನ್ಯಾಯಾಲಯವು ತುರ್ತು ವಿಚಾರಣಾ ಪಟ್ಟಿಗೆ ಸೇರಿಸಲು ಒಪ್ಪಲಿಲ್ಲ. ಬದಲಿಗೆ, ಬೇಸಿಗೆ ರಜೆಯ ನಂತರ ಸುಪ್ರೀಂ ಕೋರ್ಟ್ ಪುನರಾರಂಭಗೊಳ್ಳುವ ಮೊದಲ ದಿನವಾದ ಜುಲೈ ೧೩ ರಂದು ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ಪೀಠವು ನಿರ್ದೇಶಿಸಿತು.
ಕೋಟಿಗಟ್ಟಲೆ ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಈ ಭ್ರಷ್ಟಾಚಾರದ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ಉಸ್ತುವಾರಿಯಲ್ಲೇ ಸಿಬಿಐ ನೇತೃತ್ವದ ಬಹು-ಶಿಸ್ತಿನ ಎಸ್‌ಐಟಿಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಜೊತೆಗೆ, ಮಂದಿರದ ಸಿಸಿಟಿವಿ ದೃಶ್ಯಾವಳಿಗಳು, ಡಿವಿಆರ್ ರೆಕಾರ್ಡಿಂಗ್‌ಗಳು, ಡಿಜಿಟಲ್ ಪಾವತಿ ಲಾಗ್‌ಗಳು ಮತ್ತು ದೇಣಿಗೆ ದಾಖಲೆಗಳನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆಯುವವರೆಗೂ ಸುರಕ್ಷಿತವಾಗಿ ಕಾಯ್ದಿರಿಸಲು ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ.
“ಅಯೋಧ್ಯೆಯ ವೈಭವವನ್ನು ಮರುಸ್ಥಾಪಿಸಲು ತಲೆಮಾರುಗಳು ಹೋರಾಡಿವೆ. ಇದು ಕೇವಲ ಸಣ್ಣ ವಿಷಯವಲ್ಲ; ದೇಶಾದ್ಯಂತ ಲಕ್ಷಾಂತರ ಭಕ್ತರ ಭಾವನೆಗಳ ಮೇಲೆ ಪ್ರಭಾವ ಬೀರುವ ಗಂಭೀರ ಸಂಗತಿಯಾಗಿದೆ” ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ದೇಣಿಗೆ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಯೋಧ್ಯೆ ಪೊಲೀಸರು ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಕೃಷ್ಣ ಮೋಹನ್ ನೀಡಿದ ದೂರಿನ ಆಧಾರದ ಮೇಲೆ ಈ ಎಫ್‌ಐಆರ್ ದಾಖಲಾಗಿತ್ತು. ಬಂಧಿತರಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಚಾಲಕ ಹಾಗೂ ದೇಣಿಗೆ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.
ದೇಣಿಗೆ ಪೆಟ್ಟಿಗೆಯಲ್ಲಿದ್ದ ನಗದು ಮತ್ತು ಬ್ಯಾಂಕ್‌ಗೆ ಜಮೆಯಾಗುತ್ತಿದ್ದ ಮೊತ್ತದ ನಡುವೆ ವ್ಯತ್ಯಾಸ ಕಂಡುಬಂದಾಗ ಟ್ರಸ್ಟ್‌ನ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಇದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಹಣ ಎಣಿಕೆ ಮಾಡುವ ಕೋಣೆಯಲ್ಲಿ ಯಾರಿಗೂ ತಿಳಿಯದಂತೆ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಪ್ರಮುಖ ಸಿಸಿಟಿವಿ ಕ್ಯಾಮೆರಾಗಳಿಗೆ ಅಡ್ಡಲಾಗಿ ನಿಂತು, ಸಿದ್ಧಪಡಿಸಿದ ನಗದಿನ ಕಂತೆಗಳಿಂದ ಹಣವನ್ನು ಕದ್ದು ಬಟ್ಟೆಯೊಳಗೆ ಬಚ್ಚಿಡುತ್ತಿದ್ದ ದೃಶ್ಯಗಳು ಈ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರಿಗೆ ಪ್ರಮುಖ ಸಾಕ್ಷ್ಯವಾಗಿದೆ.
ವಕಾಲತ್ತು ವಹಿಸಲು ವಕೀಲರ ನಕಾರ
ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ಕದ್ದಿರುವ ಆರೋಪಿಗಳ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದಿರಲು ಅಯೋಧ್ಯೆಯ ವಕೀಲರು ನಿರ್ಧರಿಸಿದ್ದಾರೆ.
ರಾಮಮಂದಿರದಲ್ಲಿ ದೇಣಿಗೆ ಹಣ ಕದ್ದಿರುವವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸದಿರುವ ತೀರ್ಮಾನವನ್ನ ಪೈಜಾಬಾದ್ ಬಾರ್ ಅಸೋಸಿಯೇಷನ್ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಪೈಜಾಬಾದ್ ಬಾರ್ ಅಸೋಸಿಯೇಷನ್ ಅಧ್ಯಕ್ಷೇ ಕಾಳಿಕಾ ಮಿಶ್ರ ಹೇಳಿದ್ದಾರೆ ದೇವಾಲಯದ ದೇಣಿಗೆ ಕಳವು ಪ್ರಕರಣ ನಮ್ಮ ಭಾವನೆಗಳಿಗೆ ನೋವು ತಂದಿದೆ ವಕೀಲರು ಆರೋಪಿಗಳ ಪರ ನಿಲ್ಲದಿರುವ ತೀರ್ಮಾನ ಕೈಗೊಂಡಿದ್ದಾರೆ ಈ ವಿಚಾರವಾಗಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ ರಾಮಮಂದಿರದಲ್ಲಿ ದೇಣಿಗೆ ಹಣ ಕದ್ದಿರುವವರ ವಿರುದ್ಧ ವಕೀಲರು ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ ಕೆಲವರ ಈ ಕಳ್ಳತನದಿಂದ ಇಡೀ ಅಯೋಧ್ಯೆಯ ನಿವಾಸಿಗಳಿಗೆ ಕೆಟ್ಟ ಹೆಸರು ಬಂದಿದೆ ದೇಣಿಗೆ ಹಣ ಕದ್ದಿರುವ ವಿರುದ್ಧ ಬುಲ್ಡೋಜರ್ ನೀತಿಯನ್ನು ಅನುಸರಿಸಿ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಯೋಧ್ಯೆಯ ಹಿರಿಯ ವಕೀಲ ರಾಜೇಂದ್ರ ಚೌದರಿ ಆಗ್ರಹಿಸಿದ್ದಾರೆ.
ಈ ಹಿಂದೆಯೂ ಅಯೋಧ್ಯೆಯ ವಕೀಲರು ಆರೋಪ ಈ ಹಿಂದೆಯೂ ರಾಮಮಂದಿರದ ಬಳಿ ಬಾಂಬ ದಾಳಿ ನಡೆಸಿದ್ದ ಉಗ್ರರ ಪರ ವಾದ ಮಂಡಿಸದಿರುವ ತೀರ್ಮಾನ ಕೈಗೊಂಡಿದ್ದರು ೨೦೦೫ರಲ್ಲಿ ರಾಮಮಂದಿರದ ಬಳಿ ಬಾಂಬ್ ದಾಳಿ ನಡೆಸಲಾಗಿತ್ತು ಬಾಂಬ್ ದಾಳಿ ನಡೆಸಿದ ಉಗ್ರರನ್ನ ಪೈಜಾಬಾದ್ ನ್ಯಾಯಾಲಯದ ಹಾಜರುಪಡಿಸಿದಾಗ ಅವರ ಪರ ವಾದ ಮಾಡಲು ವಕೀಲರು ನಿರಾಕರಿಸಿದ್ದರು ಈಗ ಮತ್ತೆ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳರ ಪರವಾಗಿ ನಿಲ್ಲದೆ ಅವರ ಪರ ವಾಕಲತ್ತು ಆಗದಿರುವ ತೀರ್ಮಾನವನ್ನು ಅಯೋಧ್ಯ ವಕೀಲರು ಕೈಗೊಂಡಿದ್ದಾರೆ ರಾಮಮಂದಿರದ ದೇಣಿಗೆ ಕಳವು ಪ್ರಕರಣ ದಿನಕ್ಕೊಂದು ತಿರುವ ಪಡೆಯುತ್ತಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಎಂಟು ಬಂದಿಯನ್ನ ಬಂಧಿಸಿದ್ದಾರೆ ಬಂಧಿತ ಆರೋಪಿಗಳ ಮನೆ ಮೇಲೆ ನೆನ್ನೆ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು.



























