Home ಜಿಲ್ಲೆ ಮಳೆ ಹೋದರು ರೈತರಲ್ಲಿ ಬತ್ತದ ಕಾರುಣ್ಣೆಮೆ ಸಂಭ್ರಮ

ಮಳೆ ಹೋದರು ರೈತರಲ್ಲಿ ಬತ್ತದ ಕಾರುಣ್ಣೆಮೆ ಸಂಭ್ರಮ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜೂ.29: ಇಂದು ರೈತ ತನ್ನೊಡನೆ ದುಡಿಮೆ ಮಾಡುವ ಎತ್ತುಗಳೊಂದಿಗೆ ಸಂಭ್ರಮಿಸುವ ಕಾರುಣ್ಣೆಮೆಯ ಸಂಭ್ರಮದ ದಿನ.

ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾಗಿದ್ದತೂ ಇನ್ನು ಅನೇಕ ರೈತರು ಎತ್ತುಗಳಿಂದ ಕೃಷಿ ಕೆಲಸ ಮಾಡುತ್ತಿದ್ದಾರೆ.

ಈ ಮೊದಲಿನಂತೆ ಎತ್ತುಗಳ ಸಂಖ್ಯೆ ಕುಸಿದೆಯಾದರೂ. ಅವುಗಳೊಂದಿಗೆ ಬದುಕುವ ಸಂಬಂಧ ಇನ್ನು ಕಡಿತಗೊಂಡಿಲ್ಲ.

ವರ್ಷವಿಡೀ ತನ್ನೊಡನೆ ದುಡಿಯುವ ಎತ್ತುಗಳಿಗೆ ಇಂದು ಮೈತೊಳೆದು, ಕೊಂಬು ಕೆತ್ತಿ. ಗೊಂಡೆಕಟ್ಟಿ, ನಸಲು ಬಡಿಸಿ, ಸಿಂಗರಿಸಿ. ಅವುಗಳನ್ನು ಓಟದ ಸ್ಪರ್ಧೆಗೆ ಅಣಿಗೊಳಿಸಲಾಗುತ್ತದೆ.

ಇಂದು ಸಂಜೆ ಕರಿ ಹರಿಯುವ ಕಾರ್ಯಕ್ಕೆ ಹಳ್ಳಿಗಳಲ್ಲಿ ಕಳೆದ ಹಲವು ದಿನಗಳಿಂದ ಎತ್ತನ್ನು ಸಿಂಗರಿಸುವ ಕೆಲಸ ನಡೆದಿದೆ.

ಈ ವರ್ಷ ಮುಂಗಾರಿನ ಮಳೆ ಕೊರತೆಯಾಗಿದ್ದರೂ,ಉತ್ತಮ ಮಳೆಯ ನಿರೀಕ್ಷೆ ಇಲ್ಲದಿದ್ದರೂ ರೈತರಲ್ಲಿ ಎತ್ತುಗಳೊಡನೆಯ ಸಂತಸದ ಈ ದಿನಕ್ಕೆ ಕೊರತೆ ಕಂಡು ಬರುತ್ತಿಲ್ಲ. ಕಾರಣ ತುಂಗಭದ್ರ ಡ್ಯಾಂ ನಿಧಾನವಾದರೂ ತುಂಬಿ ಒಂದು ಫಲಕ್ಕಂತೂ ನೀರು ದೊರೆಯಿತ್ತದೆಂಬ ಆಶಾಭಾವನೆ ರೈತರದ್ದು.

ಕಂಪ್ಲಿ ತಾಲೂಕಿನ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಬಸವನಿಗೆ ಶೃಂಗಾರ ಮಾಡಿದ್ದು ಕಂಡುಬಂತು ಎತ್ತಿಲ್ಲದವನಿಗೆ ಎದೆಯಿಲ್ಲ ಎಂಬಂತೆ. ರೈತನ ಬದುಕಿನಲ್ಲಿ ಎತ್ತುಗಳು ಕೇವಲ ಪಶುಗಳಲ್ಲ. ಕಲ್ಯಾಣದ ಬಸವಣ್ಣನಂತೆ.

ಸಂಜೆ ಕೆಂಪು ಬಿಳಿ ಎತ್ತುಗಳು ಸಮಪಾಲದಲ್ಲಿ ಕರಿಹರಿದರೆ ಕೆಂಜೋಳ ಬೆಳೆಯುವುದು, ಬಿಳಿ ಎತ್ತು ಕರಿಹರಿದರೆ ಬಿಳಿಜೋಳ ಬೆಳೆಯುತ್ತಿತ್ತು.

ಇಂದು ಕಂಪ್ಲಿ ತಾಲೂಕಿನ ಇಟಗಿ, ರಾಮಸಾಗರ. ನೆಲ್ಲುಡಿ. ಬೆಳಗೋಡ. ಸಣಾಪುರ

ಎಮ್ಮಿಗನೂರಿನಲ್ಲಿ ತಮ್ಮ ಎತ್ತುಗಳನ್ನು ರೈತರು ತೊಳೆದು, ಕೊಂಬುಗಳನ್ನು ಬಣ್ಣದಿಂದ ಅಲಂಕರಿಸಿ, ಮೈತುಂಬ ಕೆಂಬಣ್ಣ ಹಚ್ಚಿ, ಹೊಸ ಮೂಗು ದಾರ ಹಾಕಿ ಶೃಂಗರಿಸುವ ದೃಶ್ಯ ಕಂಡುಬಂತು.