Home ಜಿಲ್ಲೆ ಬೆಂಗಳೂರು ರೌಡಿಗಳ ಮನೆ ಮೇಲೆ ಹಠಾತ್ ದಾಳಿ

ರೌಡಿಗಳ ಮನೆ ಮೇಲೆ ಹಠಾತ್ ದಾಳಿ

ಬೆಂಗಳೂರು,ಜೂ.೨೧-ನಗರ ಉತ್ತರ ವಿಭಾಗದ ೧೩ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳ ಮೇಲೆ ಇಂದು ಮುಂಜಾನೆ ದಿಢೀರ್ ದಾಳಿ ನಡೆಸಿ ಶೋಧ ಕೈಗೊಂಡು ಅಪರಾಧ ನಡೆಸುವುದಾಗಲಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.


ರೌಡಿ ನಿಗ್ರಹ ಪಡೆಗಳೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆಯನ್ನು ನಡೆಸಿ, ೧೩ ಪೊಲೀಸ್ ಠಾಣಾ ರೌಡಿ ಮನೆಗಳ ದಿಢೀರ್ ಮೇಲೆ ದಾಳಿ ನಡೆಸಲಾಗಿದೆ.


೯೭ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ. ಅವರುಗಳ ಉದ್ಯೋಗ ಕೆಲಸದ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರುಗಳ ವಿರುದ್ಧ ಈ ಹಿಂದೆ ದಾಖಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ಬಗ್ಗೆ ಹಾಗೂ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದೇ ವಾರೆಂಟ್, ಪ್ರೋಕ್ಷಮೇಷನ್, ಎಲ್ ಪಿ.ಆರ್ ಆಗಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ.


ನ್ಯಾಯಾಲಯದ ವಿಚಾರಣೆ ವೇಳೆ ತಪ್ಪದೇ ಹಾಜರಾಗಲು ಸೂಚಿಸಲಾಯಿತು. ಅವರುಗಳಿಗೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಮತ್ತು ಅಪರಾಧಗಳಲ್ಲಿ ಭಾಗಿಯಾಗದಂತೆ ಡಿಸಿಪಿ ನೇಮಗೌಡ ನೇತೃತ್ವದ ಸಿಬ್ಬಂದಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.


ಉತ್ತರ ವಿಭಾಗದ ಎಲ್ಲಾ ಸಹಾಯಕ ಪೊಲೀಸ್ ಆಯುಕ್ತರುಗಳು, ೧೩ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್ ರವರುಗಳು ಮತ್ತು ಉತ್ತರ ವಿಭಾಗದ ರೌಡಿ ನಿಗ್ರಹ ಪಡೆಗಳು ವಿಶೇಷ ಕಾರ್ಯಾಚರಣೆ ಕೈಗೊಂಡು ಒಟ್ಟು ೯೭ ರೌಡಿ ವ್ಯಕ್ತಿಗಳನ್ನು ಪರಿಶೀಲಿಸಲಾಗಿರುತ್ತದೆ