
ಕಲಬುರಗಿ,ಜೂ.21-ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂತ ಗ್ರಾಮದ ಸೀಮಾಂತರದಲ್ಲಿರುವ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ ಎಂಬ ಮಾಹಿತಿ ಮೇಲೆ ಕಲಬುರಗಿ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಲೋಕೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶಿವಶಂಕರ ಸಾಹು ಅವರ ನೇತೃತ್ವದಲ್ಲಿ ಕಮಲಾಪುರ ಪಿಎಸ್‍ಐ ಸುಖಾನಂದ ಸಿಂಗೆ, ಸಿಬ್ಬಂದಿಗಳಾದ ಗುರುನಾಥ ರೆಡ್ಡಿ, ಸೈಯದ್ ಶಕೀಲ್, ಸುನೀಲ ಚವ್ಹಾಣ್, ಹುಸೇನ ಬಾಷಾ, ಬದ್ದು ರಾಠೋಡ್, ಸಮತೋಷ ಬಾರ್ಕಿ ಮತ್ತು ರೌಡಿ ನಿಗ್ರಹದಳದ ಸಿಬ್ಬಂದಿ ಕುಪೇಂದ್ರ, ಸಂಗಮೇಶ್ವರ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿ ಸೊಂತ ಗ್ರಾಮದ ಮೇರಾಜ್ ತಂದೆ ಸಿರಾಜ್ ಪಟೇಲ್ ಎಂಬಾತನನ್ನು ಬಂಧಿಸಿ 3,75,500 ರೂ.ಮೌಲ್ಯದ 7 ಕೆ.ಜಿ., 470 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ.
ಆರೋಪಿ ಮೇರಾಜ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.


























