Home ಜಿಲ್ಲೆ ಕಲಬುರಗಿ “ಭವರಿ” ಕಥಾಗುಚ್ಛ ಸ್ತ್ರೀ ಸಂವೇದನೆ ಪ್ರತೀಕ: ಡಾ.ಕಾವ್ಯಶ್ರೀ ಮಹಾಗಾಂವಕರ್

“ಭವರಿ” ಕಥಾಗುಚ್ಛ ಸ್ತ್ರೀ ಸಂವೇದನೆ ಪ್ರತೀಕ: ಡಾ.ಕಾವ್ಯಶ್ರೀ ಮಹಾಗಾಂವಕರ್

ಕಲಬುರಗಿ,ಜೂ.21-ಸಣ್ಣ ಕಥೆಗಳು ಕಾಲಮಾನದ ಪ್ರತಿಬಿಂಬಗಳಾಗಿವೆ, ಬಿ.ಜೆ.ಪಾರ್ವತಿ ಸೋನಾರೆಯವರ ಕೃತಿ ‘ಭವರಿ’ ಕಥಾಸಂಕಲನವು ಇದಕ್ಕೆ ಹೊರತಾಗಿಲ್ಲ ಎಂದು ಹಿರಿಯ ಲೇಖಕಿ ಡಾ.ಕಾವ್ಯಶ್ರೀ ಮಹಾಗಾಂವಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜದಲ್ಲಿ ನಡೆದಿರುವ ಸ್ತ್ರೀ ಶೋಷಣೆ, ಅನ್ಯಾಯ, ಅತ್ಯಾಚಾರದ ಘಟನೆಗಳನ್ನು ಲೇಖಕಿ ಪಾತ್ರ, ವಸ್ತು, ಸಂಭಾಷಣೆ, ಸ್ಥಳೀಯ ಭಾಷೆ ಮುಖೇನ ವಿಶಿಷ್ಟ ನಿರೂಪಣ ಶೈಲಿಯಲ್ಲಿ ಹೆಣದಿದ್ದಾರೆ, ಬೀದರ ಮತ್ತು ವಿಜಯಪುರದ ಭಾಷೆಯನ್ನು ಬಳಸಿ ಕಥೆಗಳ ಮೆರಗು ಹೆಚ್ಚಿಸಿದ್ದಾರೆ. ಒಬ್ಬ ಒಳ್ಳೆಯ ಕಥೆಗಾರ್ತಿಗೆ ಇರಬೇಕಾದ ಕಲಾ ಕೌಶಲ್ಯ, ಪ್ರತಿಭೆ ಎದ್ದು ಕಾಣುತ್ತಿದೆ. ಈ ಕಥಾ ಸಂಕಲನದಲ್ಲಿರುವ ಐದು ಕಥೆಗಳು ಸ್ತ್ರೀಸಂವೇದನೆಯಿಂದ ಕೂಡಿವೆ ಎಂದರು.
ಕಲಬುರ್ಗಿಯ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘವು ಈ ಕಾರ್ಯಕ್ರಮದ ಆಯೋಜನೆ ಮಾಡಿತ್ತು. ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆಯವರು ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರೀಶೈಲ ನಾಗರಾಳ ಮತ್ತು ಡಾ.ಸಂಗನಗೌಡ ಹಿರೇಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಡಾ.ವಿಜಯಕುಮಾರ ಪರುತೆ ಕಾರ್ಯಕ್ರಮದ ಸಂಚಾಲನೆಗೈದರು. ಬಿ.ಎಚ್.ನಿರಗುಡಿ, ಡಾ.ಗವಿಸಿದ್ಧಪ್ಪ ಪಾಟೀಲ್, ಡಾ.ಶಿವಶರಣಪ್ಪ ದಾಬಾ,ಡಾ.ಶೀಲಾದೇವಿ ಬಿರಾದಾರ,ನೀಲಮ್ಮ ನೆಲೋಗಿ,ಡಾ.ಜಯದೇವಿ ಗಾಯಕವಾಡ,ಡಾ.ಸಿದ್ಧಪ್ಪ ಹೊಸಮನಿ,ಎಸ್.ಎಸ್.ಪಾಟೀಲ್,ರೇವಣಸಿದ್ಧಪ್ಪ ದುಕಾನ,ಡಾ.ಪೀರಪ್ಪ ಸಜ್ಜನ,ವಿಶ್ವನಾಥ ಭಕರೆ,ಸಿ.ಎಸ್.ಮಾಲಿಪಾಟೀಲ್,ಭೀಮಶೆಟ್ಟಿ ಮುಕ್ಕಾ,ಶಿವಾನಂದ ಮಠಪತಿ,ಎಸ್.ಎಸ್.ಹೂಗಾರ,ರಾಜೇಂದ್ರ ಝಳಕಿ ಮತ್ತು ಸಿದ್ಧರಾಮ ಸರಸಂಬಿ ಉಪಸ್ಥಿತರಿದ್ದರು.