
ಬೆಂಗಳೂರು, ಜೂ. ೨೧- ರೀಲ್ಸ್ ಮಂತ್ರಿ ಕೃಷ್ಣ ಬೈರೇಗೌಡ ಅವರೇ, ಕೇವಲ ಸೋಶಿಯಲ್ ಮೀಡಿಯಾದಲ್ಲಿ ಪೋಸ್ ಕೊಟ್ಟು ಅಧಿಕಾರಿಗಳ ಮೇಲೆ ಕಿರುಚಾಡುವ ರೀಲ್ಸ್ ಮಾಡಿದರೆ ಬೆಂಗಳೂರಿನ ದಾಹ ತೀರುವುದಿಲ್ಲ
ಕ್ಯಾಮೆರಾ ಮುಂದೆ ಬಿಲ್ಡಪ್ ನಾಟಕ ಆಡುವುದನ್ನು ನಿಲ್ಲಿಸಿ. ಇಡೀ ಬೆಂಗಳೂರು ನೀರಿಲ್ಲದೆ ತತ್ತರಿಸುವ ಮುನ್ನವೇ ಎಚ್ಚೆತ್ತುಕೊಂಡು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ ಜನಸಾಮಾನ್ಯರನ್ನು ಮತ್ತೊಮ್ಮೆ ಟ್ಯಾಂಕರ್ ಮಾಫಿಯಾದ ದಬ್ಬಾಳಿಕೆಗೆ ತಳ್ಳಿದರೆ, ಜನಸಾಮಾನ್ಯರು ನಿಮ್ಮ ಮನೆಗಳಿಗೆ, ಕಚೇರಿಗಳಿಗೆ ಮುತ್ತಿಗೆ ಹಾಕುವುದು ನಿಶ್ಚಿತ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ
ಮುಂಗಾರು ಆರಂಭದಲ್ಲೇ ಕೈಕೊಟ್ಟಿದೆ. ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತ ಅರ್ಧದಷ್ಟು ಕುಸಿದಿದೆ. ಜಲಮಂಡಳಿಯೇ ಈಗ ಆತಂಕಗೊಂಡು ಕಾವೇರಿ ನಿಗಮಕ್ಕೆ ೯.೫೬ ಟಿಎಂಸಿ ನೀರು ಕಾಯ್ದಿರಿಸುವಂತೆ ಪತ್ರ ಬರೆಯುತ್ತಿದೆ ಎಂದರೆ, ರಾಜಧಾನಿ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಕಾದಿರುವ ಕುಡಿಯುವ ನೀರಿನ ಭೀಕರ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬ ಅರಿವು ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ
ಕಳೆದ ವರ್ಷವೂ ಇದೇ ರೀತಿ ಕಣ್ಣುಮುಚ್ಚಿ ಕುಳಿತು ಇಡೀ ಬೆಂಗಳೂರನ್ನು ಟ್ಯಾಂಕರ್ ಮಾಫಿಯಾ ಕೈಗೆ ಇಟ್ಟು ಜನಸಾಮಾನ್ಯರನ್ನು ಲೂಟಿ ಮಾಡಸಿದ್ದನ್ನ ಜನರು ಮರೆತಿಲ್ಲ. ಈ ಬಾರಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು ನೋಡಿದರೆ, ಮತ್ತೊಮ್ಮೆ ಟ್ಯಾಂಕರ್ ಮಾಫಿಯಾ ಜೇಬು ತುಂಬಿಸಲು ಬೆಂಗೂರಿಗರನ್ನು ಬಲಿಪಶು ಮಾಡಲು ಹೊರಟಿದ್ದೀರಾ ಇಂದು ವಾಗ್ದಾಳಿ ನಡೆದಿದ್ದಾರೆ
ಜಲಮಂಡಳಿಯ ಈ ಗಂಭೀರ ಆತಂಕಕ್ಕೆ ನಿಮ್ಮ ಸರ್ಕಾರದ ಪೂರ್ವಸಿದ್ಧತೆ ಏನು?
೧.೫೦ ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಲು ನೀವೇನು ಯೋಜನೆ ರೂಪಿಸಿದ್ದೀರಾ? ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆಅಧಿಕಾರಿಗಳನ್ನು ಬೈದು ಬಿಲ್ಡಪ್ ಕೊಟ್ಟು, ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಸ್ವಾಮಿ!
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇ ಗೌಡ ಅವರೇ, ನಿಮ್ಮ ಈ ಚೀಪ್ ಪಬ್ಲಿಸಿಟಿ ಗಿಮಿಕ್‌ಗಳನ್ನು ನೋಡಿ ಜನ ಈಗ ನಗುತ್ತಿದ್ದಾರೆ.
ನಿಮ್ಮನ್ನು ರೀಲ್ಸ್ ಮಂತ್ರಿ ಎಂದು ಆಡಿಕೊಳ್ಳುತ್ತಿದ್ದಾರೆ. ಎಸಿ ರೂಮಿನಲ್ಲಿ ಕೂತು ಅಧಿಕಾರಿಗಳ ಮೇಲೆ ಕ್ಯಾಮೆರಾ ಮುಂದೆ ಗರಂ ಆಗಿ, ಅದನ್ನೇ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟರೆ ಮುಗಿಯಿತೇ ನಿಮ್ಮ ಜವಾಬ್ದಾರಿ? ಇದಕ್ಕಾಗಿಯೇ ಕನ್ನಡಿಗರು ನಿಮಗೆ ಅಧಿಕಾರ ಕೊಟ್ಟಿದ್ದು? ಎಂದು ಕಿಡಿ ಕಾರಿರುವ ಅಶೋಕ್
ಬೆಂಗಳೂರಿನ ಮೂಲಸೌಕರ್ಯ ರಿಪೇರಿಯ ಹೆಸರಿನಲ್ಲಿ ನೀವು ಘೋಷಿಸಿದ ?೨,೦೦೦ ಕೋಟಿ ಹಣವನ್ನ ಸದುಪಯೋಗ ಮಾಡಿ ಜನರ ನಿತ್ಯ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿ ಎಂದು ಆಗ್ರಹಿಸಿದ್ದಾರೆ

































