
ಕಲಬುರಗಿ,ಜೂ.21-ಮನೆ ಬೀಗ ಮುರಿದು 2.35 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಿರುವ ಘಟನೆ ಕರುಣೇಶ್ವರ ನಗರದ ಬೃಂದಾವನ ಲೇಔಟ್‍ನಲ್ಲಿ ನಡೆದಿದೆ.
ರಾeಶ್ರೀ ಮೌನೇಶ್ವರ ಸೊನ್ನದ ಎಂಬುವವರ ಮನೆ ಬೀಗ ಮುರಿದು ಕಳ್ಳರು 90 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಉಂಗುರ, 45 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಉಂಗುರ, 45 ಸಾವಿರ ರೂ.ಮೌಲ್ಯದ 300 ಗ್ರಾಂ.ಬೆಳ್ಳಿಯ ಆರತಿ ತಟ್ಟೆ, 55 ಸಾವಿರ ರೂ.ಮೌಲ್ಯದ 500 ಗ್ರಾಂ.ಬೆಳ್ಳಿಯ ಬೆಳ್ಳಿ ಆರತಿ ಸಮಯ ಸೇರಿ 2.35 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಿದ್ದಾರೆ.
ರಾಜಶ್ರೀ ಅವರು ಮದುವೆ ಕಾರ್ಯಕ್ರಮ ಇದ್ದ ಪ್ರಯುಕ್ತ ತವರು ಮನೆಯಾದ ಸೊಲ್ಲಾಪುರಕ್ಕೆ ಹೋಗಿದ್ದರು. ಇದೇ ವೇಳೆ ಅವರ ಪತಿ ಮೌನೇಶ್ವರ ಅವರು ಮನೆಗೆ ಬೀಗ ಹಾಕಿಕೊಂಡು ಹರಿದ್ವಾರಕ್ಕೆ ಹೋಗಿದ್ದರು. ಈ ವೇಳೆ ಕಳ್ಳರು ಮನೆ ಬೀಗ ಮುರಿದು ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಜಶ್ರೀ ಮೌನೇಶ್ವರ ಸೊನ್ನದ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.


























