Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳು ವಿಮೋಚನಾ ಹೋರಾಟಗಾರರ ಸ್ಮರಿಸಬೇಕು

ವಿದ್ಯಾರ್ಥಿಗಳು ವಿಮೋಚನಾ ಹೋರಾಟಗಾರರ ಸ್ಮರಿಸಬೇಕು

ಕಲಬುರಗಿ,ಸೆ.19-ಭಾರತವು 1947 ಆಗಸ್ಟ್ 15 ರಂದು ಸ್ವಾತಂತ್ರ್ಯಗೊಂಡರೂ ಹೈದರಾಬಾದ್ ಸಂಸ್ಥಾನದ ನಿಜಾಮ ಮೀರ್ ಉಸ್ಮಾನ್ ಅಲಿಯು ಹೈದರಾಬಾದ್ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸದೆ ತನ್ನದೇ ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿಕೊಂಡು ಹೈದರಾಬಾದ್ ಕರ್ನಾಟಕದ ಹಲವು ಪ್ರದೇಶ ಮತ್ತು ಗ್ರಾಮಗಳಲ್ಲಿ ನಿರಾಯುಧ ಮುಗ್ಧ ಜನರ ದೌರ್ಜನ್ಯ ಮಾಡಲಾಯಿತು. ಸ್ವಾಮಿ ರಮಾನಂದ ತೀರ್ಥ, ಸರದಾರ ಶರಣಗೌಡ ಪಾಟೀಲ್, ಕೊಲ್ಲೂರು ಮಲ್ಲಪ್ಪ, ಜಗನ್ನಾಥ್ ರಾವ್ ಚಂಡ್ರಕಿ, ವಿಶ್ವನಾಥ್ ರೆಡ್ಡಿ ಮದ್ನಾಳ್, ರಾಮಚಂದ್ರ ವೀರಪ್ಪ ಮತ್ತು ಬಳ್ಳಾರಿ ಸಿದ್ದಮ್ಮ ಮುಂತಾದ ಹೋರಾಟಗಾರರು ನಿಜಾಮನ ದೌರ್ಜನ್ಯದ ವಿರುದ್ಧ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಧೀಮಂತರು. ಈ ಸಂದರ್ಭದಲ್ಲಿ ಅಂದಿನ ಭಾರತ ಸರಕಾರದ ಪ್ರಧಾನಿ ಪಂಡಿತ್ ಜವಾಹರಲಾಲ್ ನೇತೃತ್ವದ ಸರಕಾರದಲ್ಲಿ ಗೃಹ ಮಂತ್ರಿಯಾದ ಸರ್ದಾರ್ ವಲ್ಲಭಭಾಯಿ ಪಟೇಲರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಲಹೆಯಂತೆ ನಿಜಾಮನ ಖಾಸಗಿ ಸೈನ್ಯದ ವಿರುದ್ಧ ಆಪರೇಷನ್ ಪೆÇಲೋ ಹೆಸರಿನ ಪೆÇಲೀಸ್ ಕಾರ್ಯಾಚರಣೆ ಕೈಗೊಂಡು ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಿದರು. ಹೀಗಾಗಿ ನಾವು 17ನೇ ಸೆಪ್ಟೆಂಬರ್, 1948 ರಂದು ಸ್ವಾತಂತ್ರಗೊಂಡೆವು ಎಂದು ಇತಿಹಾಸ ಉಪನ್ಯಾಸಕ ಡಾ.ಚಂದ್ರಶೇಖರ್ ದೊಡ್ಡಮನಿ ಅಭಿಪ್ರಾಯಪಟ್ಟರು.
ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಹುಟ್ಟಿನಿಂದ ಸ್ವತಂತ್ರನು ಮತ್ತು ವಿಶ್ವದ ಎಲ್ಲೆಡೆ ಸ್ವತಂತ್ರನಾಗಿ ಬದುಕುವ ಹಕ್ಕು ಹೊಂದಿರುವಂತೆ ಈ ಭಾಗದ ಜನ ನಿಜಾಮನ ವಿರುದ್ಧ ಸ್ವಾತಂತ್ರ್ಯ ಪಡೆದು ಸಂಭ್ರಮಿಸುವ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಸ್. ಬಿರಾದಾರ್ ಅವರು ಈ ಭಾಗದ ಏಳು ಜಿಲ್ಲೆಗಳ ಜನರಿಗೆ ಒಂದು ವರ್ಷ ಒಂದು ತಿಂಗಳು ಎರಡು ದಿನ ತಡವಾಗಿ ಸ್ವಾತಂತ್ರ್ಯ ಸಿಕ್ಕಿರುವುದರಿಂದ ಈ ದಿನವನ್ನು ನಾವು ಸ್ವಾತಂತ್ರ್ಯೋತ್ಸವ ದಿನವನ್ನಾಗಿ ಆಚರಿಸುತ್ತೇವೆ. ಇದರ ವಿಮೋಚನಗಾಗಿ ಹೋರಾಡಿದ ಮಹಾನ್ ನಾಯಕರ ಚರಿತ್ರೆಯನ್ನು ವಿದ್ಯಾರ್ಥಿ ಯುವಜನರು ಸದಾ ಸ್ಮರಿಸಬೇಕೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಪಾಂಡು ಎಲ್. ರಾಠೋಡ್, ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಸಿದ್ದಲಿಂಗಪ್ಪ ಪೂಜಾರಿ, ಉಪನ್ಯಾಸಕರುಗಳಾದ ಬಲರಾಮ ಚವ್ಹಾಣ್ , ಶ್ರೀಶೈಲ್ ಖುರ್ದ, ರೇಣುಕಾ ಚಿಕ್ಕಮೇಟಿ, ವಿಜಯಲಕ್ಷ್ಮಿ ರೆಡ್ಡಿ, ಪಲ್ಲವಿ ಕುಲಕರ್ಣಿ,ರೋಹಿಣಿ ಕೆ. ಎಸ್, ಶಶಿಧರ್ ಭೂಸನೂರ್, ಡಾ. ಶಿವಪ್ಪ ಹೆಚ್, ಮಹಿಬೂಬ್, ರಾಜೇಶ್ ಕೆಜೆ, ನೇಸರ್ ಬೀಳಿಗಿಮಠ, ಲಕ್ಷ್ಮಿಕಾಂತ್ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.