Home ಜಿಲ್ಲೆ ಕಲಬುರಗಿ ದುಶ್ಚಟಗಳಿಂದ ದೂರವಾಗಿ ಸದೃಢರಾಗಿ

ದುಶ್ಚಟಗಳಿಂದ ದೂರವಾಗಿ ಸದೃಢರಾಗಿ

ಕಲಬುರಗಿ:ಆ:13: `ಇಂದು ಜಗತ್ತಿನಲ್ಲಿ ಭಾರತದ ಯುವಜನರ ಸಂಖ್ಯೆ ದೊಡ್ಡದಿದೆ. ಇಂತಹ ಯುವಜನರು ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳಬೇಕು. ಯಾವುದೇ ದುಷ್ಚಟಗಳಿಗೆ ದಾಸರಾಗಬಾರದು. ಅಂದಾಗ ಮಾತ್ರ ದೇಶಕ್ಕೆ ಯುವಜನರು ಸಂಪತ್ತಾಗುತ್ತಾರೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರಗಿಯ ಸಂಚಾಲಕರಾದ ಸಿಸ್ಟರ್ ಬಿ.ಕೆ.ಕವಿತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ. ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರ ಕಲ್ಬುರ್ಗಿ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರಗಿ ಸಹಯೋಗದಲ್ಲಿ ಆಯೋಜಿಸಿದ “ನಶಮುಕ್ತ ಭಾರತ್ ಅಭಿಯಾನ ಮತ್ತು ಮಿಷನ್ ಸ್ಪಂದನ ಕಾರ್ಯಕ್ರಮವನ್ನು ಚಾಲನೆ ನೀಡಿದಸಿಸ್ಟರ್ ಬಿ.ಕೆ.ಕವಿತ ಅವರು ಮಕ್ಕಳು ಹೇಗೇ ಸದೃಢರಾಗಬೇಕು ಎಂದು ಮನವಿ ಮಾಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಪ್ರತಿಜ್ಞೆಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಅಂಬೇಡ್ಕರ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿದ್ದಪ್ಪ ಎಂ.ಕಾಂತ ಅವರು ಮಕ್ಕಳಿಗೆ ಅಗತ್ಯವಾದ ಶಿಸ್ತಿನ ಕುರಿತು ಜಾಗೃತಿ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಡಾ.ಸಿದ್ದಾರ್ಥ ಮದನಕರ ಅವರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ.ಅರುಣ್ ಜೋಳದಕೂಡ್ಲಿಗಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಡಾ.ವಸಂತ ನಾಶಿ ಅವರು ಎಲ್ಲರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ. ನಿರ್ಮಲ ಸಿರಗಾಪುರ, ಡಾ. ಗಾಂಧೀಜಿ ಮೊಳಕೇರಿ. ಡಾ.ಹರ್ಷವರ್ಧನ್ ಡಾ. ಸುದರ್ಶನ ಮದನಕರ, ಡಾ. ಅರುಣ್ ಕುಮಾರ್, ಡಾ.ಶಿವಕುಮಾರ, ಡಾ. ಕರಿಬಸಪ್ಪ, ಶ್ರೀಮತಿ ಕೌಶಲ್ಯ, ಡಾ. ದತ್ತೂರಾಯ, ರಾಜಶೇಖರ್, ಸಂಜೀವಪಾಟೀಲ್, ಶೃತಿ, ಲಕ್ಷ್ಮಿಬಾಯಿ ಉಪಸ್ಥಿತರಿದ್ದರು.