Home ಜಿಲ್ಲೆ ಕಲಬುರಗಿ ಸ್ಟಾರ್ ಏರ್ ವಿಮಾನ ಸೇವೆಯ ಸಮಯದಲ್ಲಿ ಬದಲಾವಣೆ

ಸ್ಟಾರ್ ಏರ್ ವಿಮಾನ ಸೇವೆಯ ಸಮಯದಲ್ಲಿ ಬದಲಾವಣೆ

ಕಲಬುರಗಿ,ಮೇ.28: ಜೂನ್ 10 ರಿಂದ ಆರಂಭವಾಗಲಿರುವ ಕಲಬುರಗಿ-ಬೆಂಗಳೂರು ಸ್ಟಾರ್ ಏರ್ ವಿಮಾನ ಸೇವೆಯ ಸಮಯವನ್ನು ಸಂಜೆ ವೇಳೆಯಿಂದ ಬೆಳಗಿನ ವೇಳೆಗೆ ಬದಲಾವಣೆ ಮಾಡಲಾಗಿದೆ.
ಈ ಕುರಿತು ಸ್ಟಾರ್ ಏರ್ ಸಂಸ್ಥೆಯವರು ಕೆ.ಕೆ.ಸಿ.ಸಿ.ಐ ಗೆ ಮಾಹಿತಿ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ
ಸಾರ್ವಜನಿಕರು, ಉದ್ಯಮಿಗಳು ಹಾಗೂ ಪ್ರಯಾಣಿಕರಿಂದ ಬಂದ ಬೇಡಿಕೆ ಮತ್ತು ಕೆ.ಕೆ.ಸಿ.ಸಿ.ಐ ವತಿಯಿಂದ ಮಾಡಲಾದ ಮನವಿಯ ಹಿನ್ನೆಲೆಯಲ್ಲಿ ಬೆಳಗಿನ ವಿಮಾನ ಸೇವೆಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ-ಬೆಂಗಳೂರು ಮಾರ್ಗದಲ್ಲಿ ಬೆಳಗಿನ ವಿಮಾನ ಸೇವೆ ಕಲ್ಪಿಸಬೇಕು ಎಂಬುದು ಬಹುಕಾಲದ ಸಾರ್ವಜನಿಕಬೇಡಿಕೆಯಾಗಿದ್ದು, ಈ ಕುರಿತು ಕೆ.ಕೆ.ಸಿ.ಸಿ.ಐ ನಿರಂತರವಾಗಿ ಸ್ಟಾರ್ ಏರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿತ್ತು.ಇದೇ ಸಂದರ್ಭದಲ್ಲಿ, ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬೆಳಗಿನ ಸೇವೆಯಜೊತೆಗೆ ಸಂಜೆ ವೇಳೆಯಲ್ಲಿಯೂ ವಿಮಾನ ಸೇವೆಯನ್ನು ಆರಂಭಿಸುವಂತೆ ಕೆ.ಕೆ.ಸಿ.ಸಿ.ಐ ಸ್ಟಾರ್ ಏರ್ ಸಂಸ್ಥೆಯನ್ನು ಮನವಿ ಮಾಡಿದೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಕಲಬುರಗಿಯಿಂದ ಇನ್ನಷ್ಟು ನಗರಗಳಿಗೆ
ವಿಮಾನ ಸಂಪರ್ಕ ವಿಸ್ತರಣೆ ಆಗಲಿ ಹಾಗೂ ಹೆಚ್ಚಿನ ವಿಮಾನ ಸೇವೆಗಳು ಲಭ್ಯವಾಗಲಿ ಎಂದು ಕೆ.ಕೆ.ಸಿ.ಸಿ.ಐ ಆಶಿಸಿದೆ ಎಂದು ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಮತ್ತು ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ತಿಳಿಸಿದ್ದಾರೆ.