
ಕಲಬುರಗಿ,ಸೆ.19: ನಗರದ ಬ್ರಹ್ಮಪುರದ ಉತ್ತರಾದಿ ಮಠದಲ್ಲಿ ಶ್ರೀ ಸತ್ಯಾತ್ಮಸೇನೆ ವತಿಯಿಂದ ಹಮ್ಮಿಕೊಂಡ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಪ್ರಶಾಂತ ಹನುಮಾನ ಮಿತ್ರ ಮಂಡಳಿ ಸದಸ್ಯರುಗಳಿಂದ ಶ್ರೀ ಜಗನ್ನಾಥ ದಾಸರು ನಾಟಕ ನೆರವೇರಿತು.
ಗೋಪಾಲರಾವ ತೆಂಗಳಿ ರಚಿಸಿ ನಿರ್ದೇಶನ ಮಾಡಿದರು, ಪಾತ್ರಧಾರಿಗಳಾದ ಗುಂಡಚಾರ್ಯ ನರಿಬೋಳ, ಶ್ರೀನಿವಾಸ ನೆಲೋಗಿ, ವಿಜಯಕುಮಾರ ದೇವನಳ್ಳಿ, ಉದಯ ಬೆಟ್ಟಜೇವರ್ಗಿ, ಸುರೇಶ ಆತ್ಮಕೂರ್, ಗುರುರಾಜ ಬಂಕೂರ್, ಸುರೇಶ ಮಳಖೇಡ, ಚಂದ್ರಕಲಾ ಜಾಗಿರಾದಾರ್, ಸುಧಾ ಜೋಶಿ, ಅರ್ಚನಾ, ಅವರೆಲ್ಲರ ಅಭಿನಯ ಗಮನ ಸೆಳೆಯಿತು. ವಿದ್ಯಾದೀಶ ಆದ್ಯ, ಹಾಗೂ ಅನಂತಾರಾಜ್ ಮಿಸ್ತ್ರೀ ಸಂಗೀತ ಸಾತ್ ನೀಡಿದರು. ರಾಮಾಚಾರ್ಯ ಘಂಟಿ, ಪಂ.ವಿನೋದಾಚಾರ್ಯ ಗಲಗಲಿ, ಜಯತೀರ್ಥ ಜೋಶಿ, ಭರತ್ ಕುಲಕರ್ಣಿ, ರಘೋತ್ತಮ ಘಂಟಿ, ಕೆ ಪಿ ಗಿರಿಧರ್, ಸಾಹಿತಿಗಳಾದ ಶ್ರೀನಿವಾಸ್ ಸಿರನೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.



























