
ಕೋಲಾರ, ಜು,೪- ಕರ್ನಾಟಕ ಸರ್ಕಾರದಲ್ಲಿ ೨೦೧೬ ರಲ್ಲಿ ಮುಖ್ಯಮಂತ್ರಿಗಳಾಗಿದ್ದಂತಹ ಸಿದ್ದರಾಮಯ್ಯನವರು, ಗೃಹ ಮಂತ್ರಿಗಳಾಗಿದ್ದಂತಹ ಡಾ|| ಜಿ. ಪರಮೇಶ್ವರ್ ರವರು ಆಸಕ್ತಿಯನ್ನು ವಹಿಸಿ ಆರೋಗ್ಯ ಭಾಗ್ಯ ಯೋಜನೆಯ ವ್ಯಾಪ್ತಿಗೆ ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ತಂದ ಸಲುವಾಗಿ ಇಲಾಖೆಯವರು ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಿರುತ್ತದೆ.
ಕೋಲಾರ ಜಿಲ್ಲೆಯಲ್ಲಿ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಜಿಲ್ಲೆಯ ಪೊಲೀಸ್ ನಿವೃತ್ತ ಮತ್ತು ಹಾಲಿ ಕಾರ್ಯನಿರ್ವಹಿಸುವಂತಹ ಸಿಬ್ಬಂದಿಗಳಿಗೆ ಚಿಕಿತ್ಸೆಯನ್ನು ನೀಡಲು ಹಲವು ಖಾಸಗಿ ಆಸ್ಪತ್ರೆಗಳವರು ಮುಂದೆ ಬಂದಿದ್ದು ಅದರಲ್ಲಿ ಕೋಲಾರದ ಶ್ರೀ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಒಂದಾಗಿರುತ್ತದೆ.
ಶ್ರೀ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬೀರೇಗೌಡರು DGP & IGP, IGP(ABY ಯೋಜನೆ) ಮತ್ತು ಕೋಲಾರ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದು ಅನುಮತಿಯನ್ನು ತಮ್ಮ ಸಂಸ್ಥೆಯಿಂದ ಉತ್ತಮವಾದ ಚಿಕಿತ್ಸೆಯನ್ನು ನೀಡಲು ಸಿದ್ಧರಿದ್ದು ತಮ್ಮ ಎಲ್ಲಾ ರೀತಿಯ CT Scan, ultrasound, Doppler, Cardiology, Neurology, ENT, Opthamology ಹಾಗೂ ಇತರೆ ಸೌಲಭ್ಯಗಳು ಇರುವುದಾಗಿ ತಿಳಿಸಿರುತ್ತಾರೆ. ಈ ಮೂಲಕ ಸರ್ವರ ಸೇವೆಯನ್ನು ಬಯಸುತ್ತಾರೆ.
ಇವರ ಪತ್ರವನ್ನು ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕನ್ನಿಕಾ ಸಕ್ರಿವಾಲ ರವರಿಗೆ ನಿವೃತ್ತ ಎಎಸ್‌ಐ ಕೆ.ಎನ್. ರವೀಂದ್ರನಾಥ್‌ರವರು, ನಿವೃತ್ತ ಎ.ಎಸ್.ಐ. ಜಯಪ್ಪ ನೀಡಿ, ತಮ್ಮ ಶಿಫಾರಸ್ಸಿನೊಂದಿಗೆ ಸಂಬಂಧಪಟ್ಟಂತಹ ಮೇಲಾಧಿಕಾರಿಗಳಿಗೆ ಕಳುಹಿಸಿಕೊಟ್ಟು ಜಿಲ್ಲೆಯ ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಉತ್ತಮ ಚಿಕಿತ್ಸೆಯನ್ನು ಕೊಡಿಸಿ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿರುತ್ತಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್.ಪಿ. ರವರು ಜಿಲ್ಲೆಯ ಹಗಲಿರುಳು ಶ್ರಮಿಸುವಂತಹ ಪೊಲೀಸ್ ವರ್ಗದವರ ಆರೋಗ್ಯದ ಹಿತಚಿಂತನೆ ಉತ್ತಮ ಚಿಕಿತ್ಸೆ ಕೊಡಿಸಲು ತಮ್ಮ ಸಂಪೂರ್ಣ ಸಹಕಾರ ಇರುತ್ತದೆ. ಪತ್ರಗಳನ್ನು ಶಿಫಾರಸ್ಸಿನೊಂದಿಗೆ ತಕ್ಷಣ ಮೇಲಾಧಿಕಾರಿಗಳಿಗೆ ಕಳುಹಿಸಲು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿರುತ್ತಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು IಉP ರವರುಗಳು ಇದಕ್ಕೆ ತಕ್ಷಣ ಮಂಜೂರಾತಿಯನ್ನು ನೀಡಿ ಆದೇಶ ನೀಡಬೇಕೆಂದು ಸಹ ಮನವಿ ಮಾಡಿಕೊಂಡಿರುತ್ತಾರೆ.

































