Home ಜಿಲ್ಲೆ ಕಲಬುರಗಿ ವಿಶೇಷ ಕೃಷಿ ಜಾಗೃತಿ ಅಭಿಯಾನಕ್ಕೆ ಚಾಲನೆ:ಹೊಲದ ಮಣ್ಣಿನ ಆರೋಗ್ಯದ ಪರೀಕ್ಷೆಗೆ ತಿಪ್ಪೆಸ್ವಾಮಿ ಸಲಹೆ

ವಿಶೇಷ ಕೃಷಿ ಜಾಗೃತಿ ಅಭಿಯಾನಕ್ಕೆ ಚಾಲನೆ:ಹೊಲದ ಮಣ್ಣಿನ ಆರೋಗ್ಯದ ಪರೀಕ್ಷೆಗೆ ತಿಪ್ಪೆಸ್ವಾಮಿ ಸಲಹೆ

ಆಳಂದ:ಮೇ.20: ರೈತರು ತಮ್ಮ ಹೊಲಗಳಲ್ಲಿ ಬಿತ್ತನೆಗೆ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸುವುದು ಅತ್ಯಂತ ಅವಶ್ಯಕ ಎಂದು ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಅವರು ರೈತರಿಗೆ ಸಲಹೆ ನೀಡಿದರು.
ತಾಲೂಕಿನಾದ್ಯಂತ ಕೃಷಿ ಇಲಾಖೆ ಮೂಲಕ ಆರಂಭಿಸಿದ ಮೇ 15 ರಿಂದ 31ರವರೆಗೆ ನಡೆಯುವ ವಿಶೇಷ ಕೃಷಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರೈತರು ಮುಂಜಾಗ್ರತೆಯಿಂದ ಸಿದ್ಧರಾಗಬೇಕೆಂಬ ಉದ್ದೇಶದಿಂದ ತಾಲೂಕಿನ ಎಲ್ಲಾ ಹೋಬಳಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೇ 15 ರಿಂದ ಆರಂಭಿಸಲಾಗಿದ್ದು, ಮೇ ಕೊನೆಯ ವಾರದವರೆಗೆ ನಿರಂತರವಾಗಿ ನಡೆಯಲಿದೆ.ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಹೇಳಿದರು.
ಮಣ್ಣಿನ ಆರೋಗ್ಯ ತಿಳಿದ ನಂತರವೇ ಯಾವ ಬೆಳೆ ಬೆಳೆಯಬೇಕು, ಎಷ್ಟು ಪ್ರಮಾಣದ ರಸಗೊಬ್ಬರ ಬಳಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಮಣ್ಣು ಪರೀಕ್ಷೆ ಮಾಡಿಸದೆ ಅಂದಾಜಿನ ಮೇಲೆ ಗೊಬ್ಬರ ಹಾಕುವುದರಿಂದ ಹಣ ವ್ಯರ್ಥವಾಗಿ ಇಳುವರಿ ಕಡಿಮೆಯಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಉತ್ತಮ ಇಳುವರಿ ಪಡೆಯಲು ಗುಣಮಟ್ಟದ ಬಿತ್ತನೆ ಬೀಜ ಆಯ್ಕೆ ಮಾಡುವುದು ಅತ್ಯಗತ್ಯ. ಬೀಜಗಳನ್ನು ಬಿತ್ತನೆಗೆ ಮುನ್ನ ಗಟ್ಟಿಗೊಳಿಸಬೇಕು ಹಾಗೂ ಶಿಫಾರಸ್ಸು ಮಾಡಿದ ಶಿಲೀಂದ್ರ ನಾಶಕ ಮತ್ತು ಜೀವಾಣು ಗೊಬ್ಬರಗಳಿಂದ ಬೀಜೋಪಚಾರ ಮಾಡಬೇಕು. ಬೀಜೋಪಚಾರದಿಂದ ಬೀಜ ಮೊಳಕೆಯೊಡೆಯುವ ಶಕ್ತಿ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.
ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಆರೋಗ್ಯ ಹಾಳುಮಾಡುತ್ತದೆ. ಸಾರಜನಕ, ರಂಜಕ ಮತ್ತು ಪೆÇಟ್ಯಾμï ಅನ್ನು ಸಮತೋಲನವಾಗಿ ಬಳಸಬೇಕು. ತಿಪ್ಪೆ ಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಹೆಚ್ಚಾಗಿ ಬಳಸಿ ರಾಸಾಯನಿಕ ಗೊಬ್ಬರದ ಪ್ರಮಾಣ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ತೊಗರಿ ಬೆಳೆಯಲ್ಲಿ ಕಾಣಿಸಿಕೊಳ್ಳುವ ನೆಟೆ ರೋಗ ಮತ್ತು ಗೊಡ್ಡು ರೋಗ ನಿರ್ವಹಣೆ ಕುರಿತು ರೈತರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಬಸವನ ಹುಳು ಮತ್ತು ಕಸ್ಟೋಟಾ ಕಳೆ ನಿಯಂತ್ರಣಕ್ಕೆ ಸಕಾಲದಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ಇಳುವರಿ ನಷ್ಟ ಅನಿವಾರ್ಯ ಎಂದು ತಿಪ್ಪೇಸ್ವಾಮಿಯವರು ಹೇಳಿದರು.
ಖಜೂರಿ ಗ್ರಾಮದ ಖಜೂರಿ ಆರ್‍ಎಸ್‍ಕೆ ಕೇಂದ್ರದಲ್ಲಿ ನಡೆದ ವಿಶೇಷ ಕೃಷಿ ಜಾಗೃತಿ ಅಭಿಯಾನ ದಲ್ಲಿ ಬೀಜೋಪಚಾರದ ಮಹತ್ವ ಹಾಗೂ ರಸಗೊಬ್ಬರಗಳ ಸಮತೋಲನ ಬಳಕೆ ಕುರಿತು ರೈತರಿಗೆ ವಿಸ್ತೃತ ಮಾಹಿತಿ ನೀಡಲಾಯಿತು.
ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಫಲವತ್ತತೆ ನಾಶ ಮಾಡುತ್ತದೆ ಎಂದು ಎಚ್ಚರಿಸಿದ ಅಧಿಕಾರಿಗಳು, ಸಾರಜನಕ, ರಂಜಕ ಮತ್ತು ಪೆÇಟ್ಯಾμï ಅನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ಸಮತೋಲನವಾಗಿ ಬಳಸಬೇಕೆಂದು ಸೂಚಿಸಿದರು. ಇಫೆÇ್ಕೀ ಕಂಪನಿಯ ಅಧಿಕಾರಿಗಳು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಕೆಯ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಿ ಮಾಹಿತಿ ತಿಳಿಸಿದರು.
ಪಿಕೆಪಿಎಸ್ ಅಧ್ಯಕ್ಷ ಶರಣಪ್ಪ ಢಗೆ, ಕಾರ್ಯದರ್ಶಿ ಸಿದ್ಧರಾಮ ಆಳಂಗೆ, ಚಿತಾನಂದ ಢಗೆ, ರಮೇಶ ಶೇರಿ, ನರಸಿಂಗ ನಗರೆ, ಶಂಕರ ಢಗೆ ಸೇರಿ ಅನೇಕ ರೈತರು ಹಾಜರಿದ್ದರು.
ಎಟಿಎಂ ಧನರಾಜ ಮುಲÀಗೆ, ಲಿಂಗಪ್ಪ ತುಪ್ಪದೊಡ್ಡಿ, ಸಿದ್ಧರಾಮ ವಾಡೆ ಹಾಜರಿದ್ದರು. ನರೋಣಾದಲ್ಲಿನ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಬಸವರಾಜ ಅಟ್ಟೂರ, ಆತ್ಮಾ ಅಧಿಕಾರಿ ಸಂಜಯ ಸೌಧಿ ಬಿಟಿಎಂ, ಹಾಗೂ ಇಫೆÇ್ಕೀ ಲಿಮಿಟೆಡ್ ಪ್ರಾದೇಶಿಕ ವ್ಯವಸ್ಥಾಪಕ ಸಿದ್ದರೂಡ ಸೇರಿ ರೈತರು ಇಲಾಖೆಯ ಸಿಬ್ಬಂದಿಗಳು ಹಾಜರಿದ್ದು ಮಾಹಿತಿ ಒದಗಿಸಿದರು.
ಅಲ್ಲದೆ ನಿಂಬಾಳ, ಮಾದನಹಿಪ್ಪರಗಾ, ಕೇರೂರ, ಗೋಳಾ ಬಿ. ರಿಕಿನ ಆಲೂರ ಇನ್ನಿತರ ಗ್ರಾಮಮಗಳಲ್ಲಿ ಕೃಷಿ ಇಲಾಖೆ ಸಿಬ್ಬಂದಿಗಳು ವಿಶೇಷ ಅಭಿಯಾನ ನಡೆದಿದೆ.