Home ಜಿಲ್ಲೆ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಘೋಷಣೆ೧೦೦ ವಿದ್ಯಾರ್ಥಿಗಳಿಗೆ ಉಚಿತ ಪಿ.ಯು ಶಿಕ್ಷಣ

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಘೋಷಣೆ೧೦೦ ವಿದ್ಯಾರ್ಥಿಗಳಿಗೆ ಉಚಿತ ಪಿ.ಯು ಶಿಕ್ಷಣ

ಬೀದರ್: ಏ.೨೫:ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ ೯೫ಕ್ಕೂ ಅಧಿಕ ಅಂಕ
ಗಳಿಸಿದ ರಾಜ್ಯದ ೧೦೦ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ವರ್ಷದ ಪಿ.ಯು ಶಿಕ್ಷಣ
ಉಚಿತವಾಗಿ ನೀಡುವುದಾಗಿ ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಪ್ರಕಟಿಸಿದೆ.
೧೦೦ ಸ್ಥಾನಗಳಲ್ಲಿ ೨೫ ಸ್ಥಾನಗಳನ್ನು ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದ
ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ
ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಉಚಿತ ಸ್ಥಾನಗಳಲ್ಲಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಓದಿದ,
ತಂದೆಯನ್ನು ಕಳೆದುಕೊಂಡ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡಲಾಗುವುದು
ಎಂದು ಹೇಳಿದ್ದಾರೆ.
ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಎರಡು ವರ್ಷದ ಬೋಧನಾ ಶುಲ್ಕದ ಸಂಪೂರ್ಣ ರಿಯಾಯಿತಿ
ಇರಲಿದೆ. ಅರ್ಹ ವಿದ್ಯಾರ್ಥಿಗಳು ಸಮೂಹದ ಪದವಿ ಪೂರ್ವ ಕಾಲೇಜುಗಳನ್ನು ಸಂಪರ್ಕಿಸಬಹುದು
ಎAದು ತಿಳಿಸಿದ್ದಾರೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಉಚಿತ ಶಿಕ್ಷಣ ಯೋಜನೆಯ
ಉದ್ದೇಶವಾಗಿದೆ ಎಂದು ಹೇಳಿದ್ದಾರೆ.


ಎಐಸಿಯುಗೆ ಶೇ ೧೦೦ ಫಲಿತಾಂಶ

ಶಾಲೆ ಬಿಟ್ಟ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮರಳಿ ಮುಖ್ಯ
ವಾಹಿನಿಗೆ ತರಲು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಆರಂಭಿಸಿದ ಶೈಕ್ಷಣಿಕ ತುರ್ತು
ನಿಗಾ ಘಟಕ (ಎ.ಐ.ಸಿ.ಯು) ಪರಿಣಾಮಕಾರಿ ಫಲಿತಾಂಶ ನೀಡುತ್ತಾ ಮುನ್ನಡೆದಿದೆ.
ಶಾಲೆ ಬಿಟ್ಟ ೯೦ ವಿದ್ಯಾರ್ಥಿಗಳು ಇಲ್ಲಿಯ ಶಾಹೀನ್ ಪ್ರೌಢ ಶಾಲೆಯಲ್ಲಿ ಈ ಬಾರಿಯ
ಎಸ್.ಎಸ್. ಎಲ್.ಸಿ ಪರೀಕ್ಷೆ ಬರೆದಿದ್ದರು. ಇವರಲ್ಲಿ ೮೧ ವಿದ್ಯಾರ್ಥಿಗಳು
ತೇರ್ಗಡೆಯಾಗಿದ್ದಾರೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಶಾಹೀನ್ ತುರ್ತು
ಶೈಕ್ಷಣಿಕ ನಿಗಾ ಘಟಕದಲ್ಲಿ ಓದಿದವರಾಗಿರುವುದು ವಿಶೇಷ.
ಸೌಕರ್ಯಗಳ ಕೊರತೆ ಹಾಗೂ ವೈಫಲ್ಯದಿಂದ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ
ಶೈಕ್ಷಣಿಕ ತುರ್ತು ನಿಗಾ ಘಟಕ ವರದಾನವಾಗಿ ಪರಿಣಮಿಸಿದೆ.
ವಿಶೇಷ ನಿಗಾ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯ ವಾಹಿನಿಗೆ ತರುವ ಹಾಗೂ ಅವರ
ಶೈಕ್ಷಣಿಕ ಪ್ರಗತಿಗೆ ನೆರವಾಗುವ ಶಾಹೀನ್‌ನ ಶೈಕ್ಷಣಿಕ ತುರ್ತು ನಿಗಾ ಘಟಕದ
ಮಾದರಿಯನ್ನು ಪ್ರಶಂಸಿಸಿರುವ ಜಾಗತಿಕ ಮಟ್ಟದ ನಿಯತಕಾಲಿಕೆಯ ಭಾರತೀಯ ಆವೃತ್ತಿಯಾದ
ಫೋಬ್ರ‍್ಸ್ ಇಂಡಿಯಾ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್
ಖದೀರ್ ಅವರನ್ನು ‘ಲೀಡರ್ ಆಫ್ ಟುಮಾರೋ’ ಎಂದು ಗುರುತಿಸಿದೆ.
ಇದು, ಈಗ ಶಿಕ್ಷಣ ಕ್ಷೇತ್ರವನ್ನೂ ನೇತೃತ್ವದ ಕೇಂದ್ರವಾಗಿ ಪರಿಗಣಿಸುತ್ತಿರುವುದರ
ನಿದರ್ಶನವಾಗಿದೆ.


ಪ್ರಿ ಪ್ಲಸ್ ಟು ಫೌಂಡೇಷನ್ ಕೋರ್ಸ್

ಎಸ್.ಎಸ್.ಎಲ್.ಸಿ ಪಾಸ್/ ಫೇಲ್ ಆದ, ಬೇಸಿಕ್‌ನಲ್ಲಿ ದುರ್ಬಲರಾದ, ವಿಷಯಗಳ ಮೇಲೆ
ಹಿಡಿತವಿಲ್ಲದ, ಕಾನ್ಸೆಪ್ಟ್ ಅರಿತುಕೊಳ್ಳಲಾಗದ ವಿದ್ಯಾರ್ಥಿಗಳ ನೀಟ್ / ಜೆಇಇ ಕನಸು
ಸಾಕಾರಗೊಳಿಸಲು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಮೂರು ವರ್ಷದ ಪ್ರಿ ಪ್ಲಸ್ ಟು
ಫೌಂಡೇಷನ್ ಕೋರ್ಸ್ ಸಹ ಆರಂಭಿಸಿದೆ.
ಸಮೂಹವು ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ ಕೋರ್ಸಗೆ
ಶಿಕ್ಷಣ ತಜ್ಞರು ಹಾಗೂ ಪಾಲಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕೋರ್ಸನಲ್ಲಿ ಮೊದಲ ವರ್ಷ ಮಕ್ಕಳ ಶೈಕ್ಷಣಿಕ ಅಡಿಪಾಯ ಬಲಪಡಿಸಲಾಗುವುದು. ಎ.ಐ.ಸಿ.ಯು
ಮೂಲಕ ಗಣಿತ ಹಾಗೂ ಭಾಷಾ ವಿಷಯಗಳ ಮೇಲೆ ಹಿಡಿತ ಸಾಧಿಸುವಂತೆ ಮಾಡಲಾಗುವುದು ಎಂದು
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸುತ್ತಾರೆ.
ಎ.ಐ.ಸಿ.ಯು ನಲ್ಲಿ ಆರು ಮಕ್ಕಳಿಗೆ ಒಬ್ಬರು ಶಿಕ್ಷಕರು ಇರುವರು. ಆರರಿಂದ ಹತ್ತನೇ
ತರಗತಿ ವರೆಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ಅನ್ನು ಸುಧಾರಿಸುವರು. ಇದರಿಂದ
ಮಕ್ಕಳಿಗೆ ಬಹು ಆಯ್ಕೆ, ಕಾನ್ಸೆಪ್ಟ್ ಅರ್ಥವಾಗುವುದು. ಗುರಿ ಸ್ಪಷ್ಟವಾಗುವುದು. ಬಳಿಕ
ವಿದ್ಯಾರ್ಥಿಗಳಿಗೆ ಪಿಯುಸಿಗೆ ಪ್ರವೇಶ ಕೊಡಲಾಗುವುದು ಎಂದು ಹೇಳುತ್ತಾರೆ.
ಈ ಕೋರ್ಸ್ ದೇಶದ ವಿಶಿಷ್ಟ ಕೋರ್ಸ್ ಆಗಿದೆ. ಇದನ್ನು ಪೂರೈಸಿದ ವಿದ್ಯಾರ್ಥಿಗಳು
ಪಿಯುಸಿಯಲ್ಲಿ ಮೊದಲ ದಿನದಿಂದಲೇ ಬಹು ಆಯ್ಕೆ ಅಭ್ಯಾಸ ಮಾಡಲು ಆರಂಭಿಸುತ್ತಾರೆ.
ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜೀವನದ ಯಾವುದೇ ಶೈಕ್ಷಣಿಕ ಯಾತ್ರೆಯಲ್ಲಿ
ಅವರು ಹಿಂದೆ ಬೀಳುವುದಿಲ್ಲ ಎಂದು ತಿಳಿಸುತ್ತಾರೆ.
ಶಾಹೀನ್ ವೆಬ್‌ಸೈಟ್ hಣಣಠಿs://shಚಿheeಟಿgಡಿouಠಿ.oಡಿg ಹಾಗೂ ಟೋಲ್ ಫ್ರೀ ಸಂಖ್ಯೆ ೧೮೦೦ ೧೨೧ ೬೨೩೫ ಗೆ
ಸಂಪರ್ಕಿಸಿ ಈ ಕುರಿತು ಮಾಹಿತಿ ಪಡೆಯಬಹುದು ಎಂದು ತಿಳಿಸುತ್ತಾರೆ.