Home ಜಿಲ್ಲೆ ಆಯುರ್ವೇದ ಸೇವಾ ಸಮಿತಿಗೆ ಆಯ್ಕೆ

ಆಯುರ್ವೇದ ಸೇವಾ ಸಮಿತಿಗೆ ಆಯ್ಕೆ

ಹುಬ್ಬಳ್ಳಿ: ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ.


ಸಮಿತಿಯ ಅಧ್ಯಕ್ಷರಾಗಿ ಪದ್ಮಶ್ರೀ ಡಾ. ಎಂ.ಎA. ಜೋಶಿ, ಉಪಾಧ್ಯಕ್ಷರಾಗಿ ಎಂ.ಬಿ. ದೇಸಾಯಿ ಹಾಗೂ ಡಾ. ಪಿ.ಕೆ. ಗಂಡಮಾಲಿ, ಸಭಾಪತಿಯಾಗಿ ಗೋವಿಂದ ಜೋಶಿ, ಉಪಸಭಾಪತಿಯಾಗಿ ಡಾ. ಕೃಷ್ಣಪ್ರಸಾದ, ಕಾರ್ಯದರ್ಶಿಯಾಗಿ ಸಂಜೀವ ಜೋಶಿ, ಸದಸ್ಯರಾಗಿ ಡಾ. ವಿ.ಆರ್. ಪಾಟೀಲ್, ಡಾ. ಪ್ರದೀಪ ದೇಸಾಯಿ, ಡಾ. ಶ್ರೀನಿವಾಸ ಎಂ. ಜೋಶಿ, ಡಾ. ಭಾಸ್ಕರ ಪಾಟೀಲ, ಡಾ. ಬಿ.ಆರ್. ಪಾಟೀಲ, ಡಾ. ಮಹಾವೀರ ಹಾವೇರಿ, ಡಾ. ಮಹೇಶ ನಾಲ್ವಾಡ, ಎಸ್.ಆರ್. ಮಾಮಲೇದೇಶಪಾಂಡೆ, ರಾಘವೇಂದ್ರ ತವನಪ್ಪನವರ ಆಯ್ಕೆಯಾಗಿದ್ದಾರೆ. ಆಮಂತ್ರಿತರಾಗಿ ಡಾ. ಪ್ರಶಾಂತ್ ಎ.ಎಸ್., ಡಾ. ಜಿ.ಆರ್. ಜೋಶಿ, ಡಾ. ಗುರುಪ್ರಸಾದ, ಡಾ. ಎಸ್.ಎಂ. ಕರ್ಣೂಲಕರ, ಡಾ. ಆನಂದ ಹುಲಮನಿ, ಡಾ. ಕೆ.ಆರ್. ಕುಲಕರ್ಣಿ, ರಾಧಾಬಾಯಿ ಚಿಕ್ಕೋಡಿಕರ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಡಾ. ಪ್ರದೀಪ ದೇಸಾಯಿ ಅವರನ್ನು ನರ್ಸಿಂಗ್ ಸ್ಕೂಲ್‌ನ ಸಭಾಪತಿಯಾಗಿ ನಾಮನಿರ್ದೇಶನ ಮಾಡಲಾಯಿತು ಎಂದು ಆಯುರ್ವೇದ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.