Home ಜಿಲ್ಲೆ ಬೆಂಗಳೂರು ಸೆ. ೨೦ರಂದು ಭಾರತೀ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆ

ಸೆ. ೨೦ರಂದು ಭಾರತೀ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆ

ರಾಮನಗರ, ಸೆ. ೧೮: ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ದಿ ಭಾರತೀ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸರ್ವ ಸದಸ್ಯರ ಸಭೆ ಸೆ. ೨೦ರ ಭಾನುವಾರ ವಿವೇಕಾನಂದನಗರ, ಬಿ.ಎಂ. ರಸ್ತೆಯಲ್ಲಿರುವ ರಾಯಲ್ ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೆ. ಚಂದ್ರಯ್ಯ ತಿಳಿಸಿದರು.


ನಗರದ ಸೊಸೈಟಿ ಕಚೇರಿ ಆವರಣದಲ್ಲಿ ಗುರುವಾರ ಆಡಳಿತ ಮಂಡಳಿ ಸದಸ್ಯರ ಜೊತೆ ಸರ್ವ ಸದಸ್ಯರ ಸಭೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬಿ.ಎಲ್. ಲಕ್ಕೇಗೌಡರು ಸಂಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಳೆದ ೨೮ ವರ್ಷಗಳಿಂದ ಸೊಸೈಟಿ ಉತ್ತಮವಾಗಿ ಲಾಭದಲ್ಲಿ ನಡೆಯುತ್ತಾ ಬಂದಿದೆ. ತಾಲ್ಲೂಕಿನಲ್ಲಿ ಜನರ ಸೇವೆ ಮಾಡುತ್ತಾ ಬಂದಿದೆ. ೪೭೭೯ ಸದಸ್ಯರು ಸಂಘದಲ್ಲಿದ್ದು ೨೦೨೫-೨೬ನೇ ಸಾಲಿನಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳ ಉತ್ತಮ ಸಹಕಾರದಿಂದ -೪೪,೩೭೩,೩೫ ಲಾಭಗಳಿಸಿದೆ. ವಾರ್ಷಿಕವಾಗಿ -೪೧ ಕೋಟಿ ವಹಿವಾಟು ಮಾಡಲಾಗುತ್ತಿದೆ. ಶೇ. ೧೨ ರಷ್ಟು ಬಡ್ಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ -೧೦ ಕೋಟಿ ೩೩ಲಕ್ಷ ಸಾಲ ನೀಡಲಾಗಿದೆ ಎಂದರು.


ಷೇರು ಬಂಡವಾಳ -೧ ಕೋಟಿ ೩೮ ಲಕ್ಷ ಇದೆ. ವಾರ್ಷಿಕ ಶೇ. ೧೦ರ ಬಡ್ಡಿದರದಲ್ಲಿ ಆಭರಣ ಸಾಲ ನೀಡಲಾಗುತ್ತಿದೆ. ನಮ್ಮಲ್ಲಿ ಠೇವಣ ಸೌಲಭ್ಯ ಸಹ ಇದೆ. ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ. ೮೫ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಯಲ್ಲಿ -೨ ಸಾವಿರಗಳ ಕೈಗಡಿಯಾರ ನೀಡಲಾಗುತ್ತಿದೆ. ಜೊತೆಗೆ ಸದಸ್ಯರ ಮರಣೋತ್ತರವಾಗಿ ನಾಮಿನಿ ಸದಸ್ಯರಿಗೆ ಮರಣ ಪರಿಹಾರ ನಿಧಿ ನೀಡಲಾಗುತ್ತಿದೆ ಎಂದು ಹೇಳಿದರು.


ಸದಸ್ಯರು ಸೆ. ೨೦ರ ಭಾನುವಾರ ಬೆಳಿಗ್ಗೆ ೧೦.೩೦ ಗಂಟೆಗೆ ವಿವೇಕಾನಂದನಗರದ ರಾಯಲ್ ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯುವಸಭೆಗೆ ಆಗಮಿಸಿ ಸೊಸೈಟಿ ಮತ್ತಷ್ಟು ಎತ್ತರಕ್ಕೆ ಬೆಳೆದು ಇನ್ನಷ್ಟು ಜನ ಸೇವೆಗೆ ಮುಂದಾಗುವ ದೃಷ್ಟಿ ಯಿಂದ ಸಲಹೆ ಸಹಕಾರ ನೀಡಬೇಕು ಎಂದರು. ಇದೇ ವೇಳೆ ಸೊಸೈಟಿಯ ೨೦೨೫-೨೬ನೇ ಸಾಲಿನ ಆಹ್ವಾನ ಪತ್ರಿಕೆ ಮತ್ತು ಆಡಿಟ್ ವರದಿ ಲಾಭಾಂಶದ ವಿವರದ ಪುಸ್ತಕ ಬಿಡುಗಡೆ ಮಾಡಿದರು.


ಆಡಳಿತ ಮಂಡಳಿ ಉಪಾಧ್ಯಕ್ಷ ಸಿ. ಸೋಮೇಗೌಡ, ನಿರ್ದೇಶಕರಾದ ಕೆ.ಪಿ. ಉಮೇಶ್, ದೊರೆಸ್ವಾಮಿ, ಜಿ.ಎಲ್. ಆಂಜನೇಯ, ಎಂ. ಶಿವಲಿಂಗಯ್ಯ, ಎ.ಆರ್. ಚಂದ್ರಶೇಖರ್, ಹೆಚ್.ಕೆ. ರುಕ್ಮಿಣ, ಎಸ್. ಕೃಷ್ಣಪ್ಪ, ಮುಖ್ಯ ಕಾರ್ಯನಿರ್ವಹಕ ಬಿ.ಎಸ್. ಸುರೇಶ್ ಇದ್ದರು.