Home ಜಿಲ್ಲೆ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ

ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ

ಕಮಲನಗರ:ಜೂ.6: ಪರಿಸರ ನಡುವೆ ಹುಟ್ಟಿ, ಬೆಳೆದು ಎಲ್ಲವನ್ನು ಪರಿಸರದಿಂದ ಪಡೆದ ನಾವು ಪರಿಸರಕ್ಕೆ ಏನು ಕೋಟ್ಟಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು ಎಂದು ಶಾಲೆ ಮುಖ್ಯಶಿಕ್ಷಕ ಎಮ್.ಎಸ್.ಹಿರೇಮಠ ಹೇಳಿದರು.

ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ವಿವೇಕಾನಂದ ಟ್ರಸ್ಟ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯರ ಪ್ರೀತಿ, ವಿಶ್ವಾಸ , ನಂಬಿಕೆಯಿಂದಾಗಿ ನಾವು ಈ ವರೆಗೆ ಪರಿಸರ ಅನುಭವಿಸಿ ಬಂದಿದ್ದೇವೆ. ನಾಳಿನ ಸಮಾಜಕ್ಕಾಗಿ ಪರಿಸರವನ್ನು ಖಾಯ್ದಿಡುವ ಕಾರ್ಯಕ್ಕೆ ನಾವು ಮುಂದಾಗಬೇಕಿದೆ. ಂಆವಿನ ಗೊರಟೆ, ಹುಣಸೆ ಬೀಜ ತಿಂದು ಎಲ್ಲೆಂದರಲ್ಲಿ ಎಸೆಯದೇ ಖಾಲಿ ಜಾಗದಲ್ಲಿ ಅದನ್ನು ಬಿತ್ತಿದ್ದರೆ ಅಲ್ಲಿ ತನ್ನಿಂದ ತಾನೇ ಗಿಡಗಳು ಬೆಳೆಯುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನ ಪಡಲಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲಿ ಎಂದರು.

ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಮಾತಣಾಡಿ, ಪರಿಸರವಿಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಗಾಳಿ, ನೀರು, ಆಹಾರ, ಮತ್ತು ಆಶ್ರಯಕ್ಕಾಗಿ ನಾವು ಪ್ರಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸಿದ್ದೇವೆ. ನೈಜ ಪರಿಸರ ಸಮತೋಲನವಿಲ್ಲದೆ ಮುಂದೊಂದು ದಿನ ಮನುಕುಲದ ಜೀವನ ಅಸಹನೀಯವಾಗುತ್ತದೆ ಎಂದರು.

ಕಾರ್ಯದರ್ಶಿ ಅಂಬಿಕಾ ಬಿರಾದಾರ, ಸಿದ್ಧಾಂತ ಎನರ್ಜಿ ಪವರ್ ಪ್ಲಾಂಟ್ ವ್ಯವಸ್ಥಾಪಕರು ವೈಜಿನಾಥ ಬಂಡೆಪ್ಪ ರಾಂಪೂರೆ, ಶಾಲೆ ಪಾಲಕರ ಪ್ರತಿನಿಧಿ ವಿಜಯಕುಮಾರ ಮುರ್ಕೆ, ಸಿದ್ರಾಮ ಕುಂಬಾರ, ಮಲ್ಲಿಕಾರ್ಜುನ ಮೇತ್ರೆ, ರಾಣಿ ಡೋಣಗಾಪುರೆ ಸೇರಿದಂತೆ ಪ್ರಮುಖರು ಹಾಗೂ ಮಕ್ಕಳು ಇದ್ದರು.