
ಕಲಬುರಗಿ: ನಗರದ ಹೊರ ವಲಯದ ಸೈಯದ್ ಚಿಂಚೋಳಿಯಲ್ಲಿರುವ ದರ್ಗಾ ಹಜರತ್ ಸಾತೋ ಶಹೀದ್ ಅವರ ಮೂರು ದಿನಗಳ ಉರುಸ್ ಅ. 29.08.2026 ರಿಂದ 31.08.2026 ಸೋಮವಾರ ಸಮಾರೋಪಗೊಂಡಿತು. ದರ್ಗಾದ ವಂಶಪರಂಪರೆ ಮೂತವಲ್ಲಿ ಹಾಗೂ ಸಜ್ಜದಾ ನಶೀನ್ ಆಶ್ಚಾಕ್ ಅಹ್ಮದ್ ಸಿದ್ದೀಖಿ ಅವರ ನೇತೃತ್ವದಲ್ಲಿ ಸಂದಲ್ (ಗಂಧ), ಚಿರಗಾನ್ (ದೀಪ) ಮತ್ತು ಜಿಯಾರತ್, ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿದವು.
ಕಾರ್ಯಕ್ರಮದ ಸಂದರ್ಭದಲ್ಲಿ ಮೊಹಮ್ಮದ್ ಸಾಹೇಲ್ ಅವರು ನಾತ್ ಶರೀಫ್ ಪಠಿಸುವ ಮೂಲಕ ಭಕ್ತಿಭಾವ ಮೂಡಿಸಿದರು. ನಂತರ ಮುತವಲ್ಲಿ ಅವರು ಮಾತನಾಡಿ, ಉರುಸ್ ಕಾರ್ಯಕ್ರಮದ ಮಹತ್ವ, ಸೌಹಾರ್ದತೆ ಹಾಗೂ ಎಲ್ಲ ಸಮುದಾಯಗಳ ಜನರು ಒಗ್ಗಟ್ಟಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಶ್ಲಾಘಿಸಿದರು. ಗ್ರಾಮದ ವಿವಿಧ ಸಮುದಾಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದರ್ಗಾದ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ದರ್ಗಾದ ಸಜ್ಜದಾ ನಶೀನ್ ಆಶ್ಚಾಕ್ ಅಹ್ಮದ್ ಸಿದ್ದೀಖಿ ಅವರು ಅತಿಥಿಗಳಾದ ಚಿತ್ತಾಪುರ ತಾಲ್ಲೂಕಿನ ಸೈಯದ್ ಅಬ್ದುಲ್ ರಶಿದ್, ದರ್ಗಾ ಸಣ್ಣೂರ್ ಮೂತವಲಿ ಸಜ್ಜದಾ ನಶೀನ್ ಅಬ್ದುಲ್ ಸತ್ತಾರ್ ಸಾಹೇಬ್, ಬಿರಾದಾರ ಮೂತವಲ್ಲಿ ದರ್ಗಾ ಬೆಣ್ಣೂರ್ ಸೈಯದ್ ಮಕಬುಲ್ ಆಲಿ ಸಾಹೇಬ್, ಬಿರಾದಾರ ಮೂತವಲ್ಲಿ ದರ್ಗಾ ಸಣ್ಣೂರ್ ಅಬ್ದುಲ್ ಹಫೀಸ್ ಸಾಹೇಬ್ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧಿಕಾರಿ, ಕೆಇಬಿ ಅಧಿಕಾರಿ, ಪೆÇೀಲಿಸ್ ಸಿಬ್ಬಂದಿಗಳಿಗೆ ದರ್ಗಾದ ವಶಪರಂಪರೆ ಮೂತವಲ್ಲಿ ಸಜ್ಜದಾ ನಶೀನ್ ಆಶ್ವಾಕ್ ಅಹ್ಮದ್ ಅವರು ಸನ್ಮಾನಿಸಿದರು. ಗ್ರಾಮಸ್ಥರು ಮತ್ತು ಸಮಸ್ತ ಭಕ್ತರು ದರ್ಗಾ ಹಜರತ್ ಸಾತೋ ಶಹೀದ್ ಅವರ ಮೂರು ದಿನಗಳ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿದರು.
ಉರುಸ್ ಅಂಗವಾಗಿ ನಡೆದ ಸಂದಲ್ ಶರೀಫ್ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸೈಯದ್ ಪಟೇಲ್ ಮುಡ್ಡಿ, ಪಠಾಣ್ ಖಾನ್, ಅನಿಲ್ ಕುಮಾರ್ ದಂಗೆ, ಇರಣ್ಣ ಔರಾದಿ ಸೇರಿದಂತೆ ಸಿದ್ದಿಕಿ ಸಹೋದರರಾದ ಮೊಹಮ್ಮದ್ ಶಬ್ಬೀರ್, ಮೊಹಮ್ಮದ್ ಅಬ್ದುಲ್ ರಫೀಕ್, ಅಬ್ದುಲ್ ಮಜೀದ್, ಅಬ್ದುಲ್ ಸತ್ತಾರ್, ಅಬ್ದುಲ್ ಖಾದರ್, ಮೊಹಮ್ಮದ್ ತೌಸೀಫ್, ಅಬ್ದುಲ್ ಜಬ್ಬಾರ್, ಮೊಹಮ್ಮದ್ ಮುಷ್ತಾಕ್ ಹಾಗೂ ಮೊಹಮ್ಮದ್ ಗೌಸ್ ಸಿದ್ದಿಕಿ ಖಾದಿಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





























