Home ಜಿಲ್ಲೆ ಹೈಮಾಸ್ಟ್ ಅಳವಡಿಕೆ ಕಾಮಗಾರಿಗೆ ರೂ.೧ ಕೋಟಿ ಮಂಜೂರು

ಹೈಮಾಸ್ಟ್ ಅಳವಡಿಕೆ ಕಾಮಗಾರಿಗೆ ರೂ.೧ ಕೋಟಿ ಮಂಜೂರು

ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೧೪: ನಗರ ಮತಕ್ಷೇತ್ರದಲ್ಲಿ ಬರುವ ತೊರವಿ ಗ್ರಾಮ ಪಂಚಾಯಿತಿಯಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ ಜನಾಂಗದವರು ವಾಸಿಸುವ ಕಾಲೊನಿಗಳಲ್ಲಿ ಹೈಮಾಸ್ಟ್ ಅಳವಡಿಸುವ ಕಾಮಗಾರಿಗೆ ೨೦೨೬-೨೭ನೇ ಸಾಲಿನ ಕಾಲೊನಿ ಅಭಿವೃದ್ಧಿ/ಪ್ರಗತಿ ಕಾಲೊನಿ ಯೋಜನೆಯಡಿ ರೂ.೧ ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು.
ತೊರವಿ ಗ್ರಾಮದ ಅತಾಲಟ್ಟಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಹತ್ತಿರ, ಎಸ್.ಸಿ ಕಾಲೊನಿಯ ಹನುಮಾನ ದೇವಸ್ಥಾನ ಹತ್ತಿರ, ಇಂದಿರಾ ನಗರದ ಝೆಂಡಾ ಕಟ್ಟಿ ಹತ್ತಿರ, ಪರಿಶಿಷ್ಟ ಜಾತಿಯ ಸ್ಮಶಾನದಲ್ಲಿ, ಹರಳಯ್ಯ ಸಮಾಜದ ಮರಗಮ್ಮ ದೇವಸ್ಥಾನದ ಹತ್ತಿರ, ಹರಳಯ್ಯ ಸಮಾಜದ ಸಾರ್ವಜನಿಕ ಜಾಗೆಯಲ್ಲಿ, ತೊರವಿ ಮುಖ್ಯ ರಸ್ತೆಯ ತಾಂಡಾ ನಂ.೧ರ ಕ್ರಾಸ್ ಹತ್ತಿರ, ತಾಂಡಾ ನಂ.೧ರ ಸ್ಮಶಾನದಲ್ಲಿ, ಗೋವಿಂದ ಹುಬ್ಬು ಜಾಧವ ಅವರ ಮನೆ ಹತ್ತಿರದ ಸಾರ್ವಜನಿಕ ಜಾಗೆಯಲ್ಲಿ, ಅಕ್ಕುಬಾಯಿ ದೇವಸ್ಥಾನದ ಹತ್ತಿರ, ತಾಂಡಾ ನಂ.೨ರ ಪ್ರತೀಕ ಬಾಸು ರಾಠೋಡ ಅವರ ಮನೆಯ ಹತ್ತಿರದ ಸಾರ್ವಜನಿಕ ಜಾಗೆಯಲ್ಲಿ, ಹುಬ್ಬು ಹುನ್ನು ಜಾಧವ ಅವರ ಮನೆಯ ಹತ್ತಿರದ ಸಾರ್ವಜನಿಕರ ಜಾಗೆಯಲ್ಲಿ, ಗುಲಾಬಚಂದ ಮಕಾದಾಮ ಅವರ ಮನೆಯ ಹತ್ತಿರದ ಸಾರ್ವಜನಿಕರ ಜಾಗೆಯಲ್ಲಿ, ತೊರವಿ ತಾಂಡಾ ನಂ.೩ರ ಸೇವಾಲಾಲ ವೃತ್ತದ ಹತ್ತಿರ, ತಾಂಡಾ ನಂ.೪ರ ಏಳು ಮಕ್ಕಳ ತಾಯಿ ದೇವಸ್ಥಾನದ ಹತ್ತಿರ, ನವರಸಪುರ ಡಾ.ಬಿ.ಆರ್.ಅಂಬೇಡ್ಕರ್ ಕಾಲೊನಿಯಲ್ಲಿ, ನವರಸಪುರ ಎನ್.ಜಿ.ಓ ಕಾಲೊನಿ ಮತ್ತು ಲೋಕನಾಥ ಕಾಲೊನಿಯ ಬಸ್ ನಿಲ್ದಾಣದ ಹತ್ತಿರ, ನವರಸಪುರ ಕಬಾಡೆ ಕಾಲೊನಿಯ ಹನುಮಾನ ದೇವಸ್ಥಾನ ಹತ್ತಿರ, ನವರಸಪುರ ಸಿದ್ದೇಶ್ವರ ಬಡಾವಣೆಯ ಸಾರ್ವಜನಿಕ ಜಾಗೆಯಲ್ಲಿ ತಲಾ ರೂ.೪.೯೯ ಲಕ್ಷ ಮೊತ್ತದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿಗೆ ಅನುದಾನ ಬಿಡುಗೊಂಡಿದೆ.
ಈ ಸ್ಥಳದಲ್ಲಿ ಶೀಘ್ರದಲ್ಲೇ ಕಾಮಗಾರಿ ಅನುಷ್ಠಾನಗೊಳಿಸಿ ಅಲ್ಲಿನ ಜನರಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.