
ಕೋಲಾರ,ಜೂ,೧೫- ಅಧಿಕಾರ ಹಸ್ತಾಂತರ ಎಂಬುವುದಕ್ಕಿಂತ ಮುಖ್ಯವಾಗಿ ಜವಾಬ್ದಾರಿಯಾಗಿದೆ ಹಾಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ವಿಧಾನ ಪರಿಷತ್ ಶಾಸಕ ಎಂ,ಎಲ್, ಅನಿಲ್ ಕುಮಾರ್ ಅಭಿಪ್ರಾಯ ಪಟ್ಟರು.
ನಗರದ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ಜೂ ೨೧ ರಂದು ನಡೆಯಲಿರುವ ಕೆ.ಪಿ.ಸಿ.ಸಿ. ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ಈ ಕಾರ್ಯಕ್ರಮದಲ್ಲಿ ಎಲ್ಲಾ ಹಾಲಿ ಮತ್ತು ಮಾಜಿ ಶಾಸಕರುಗಳು, ಚುನಾವಣೆಗೆ ಸ್ವರ್ಧಿಸಿದವರು ಕಾಂಗ್ರೇಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳು.ಪದಾಧಿಕಾರಿಗಳು, ಬ್ಲಾಕ್ ಸಮಿತಿ ಬೂತ್ ಸಮಿತಿಗಳು ಸೇರಿದಂತೆ ಎಲ್ಲರೂ ಸಂಘಟಿತರಾದಗಾ ಮಾತ್ರ ಅರ್ಥಪೂರ್ಣವಾಗಲಿದೆ ಎಂದರು.
ನೆನ್ನೆ ನಡೆದ ಕೆ.ಪಿ.ಸಿ.ಸಿ. ಸಭೆಯಲ್ಲಿ ಜಿಲ್ಲಾ ಸಮಿತಿಗಳಿಗೆ ಉಸ್ತುವಾರಿ ನೀಡಿದ್ದಾರೆ.ಇದನ್ನು ಎಲ್ಲರೂ ಒಪ್ಪಿ ಕೊಂಡು ಬಂದಿದ್ದಾರೆ. ಕಾಂಗ್ರೇಸ್ ಪಕ್ಷದಿಂದ ಗೆದ್ದು ಸ್ಥಾನ ಮಾನ ಪಡೆದವರು ಸೇರಿದಂತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೋಲಾರವು ಬೆಂಗಳೂರಿಗೆ ಸಮೀಪವಾಗಿರುವುದರಿಂದ ನಿಗದಿತ ಸಂಖ್ಯೆಗಿಂತ ಹೆಚ್ಚಾಗಿ ಸಂಘಟಿಸ ಬೇಕಾಗಿರುವುದು ಪ್ರತಿಷ್ಠೆಯಾಗಿ ಪರಿಗಣಿಸ ಬೇಕೆಂದರು.
ಎಸ್.ಐ.ಆರ್.ಗೆ ಸಂಬಂಧಿಸಿದಂತೆ ಗೌರಿಬಿದನೂರಿನ ಸಂಪನ್ಮೊಲ ವ್ಯಕ್ತಿ ವಾಸು ಅವರು ಮತ ಪರಿಷ್ಕರಣೆ ಕುರಿತು ಅತ್ಯುತ್ತಮವಾಗಿ ಅರಿವು ಮೂಡಿಸಲಿದ್ದಾರೆ. ಈಗಾಗಲೇ ಮಾಲೂರಿನಲ್ಲಿ ಶಾಸಕ ನಂಜೇಗೌಡರು ತಮ್ಮ ಕ್ಷೇತ್ರದಲ್ಲಿ ಯಶಸ್ವಿಗೊಳಿಸಿದ್ದಾರೆ. ಅದೇ ರೀತಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಸೇರಿದಂತೆ ದಿನಕ್ಕೆ ಎರಡು ಕ್ಷೇತ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಬಿ.ಎಲ್.ಎ.ಗಳಿಗೆ ಹಾಗೂ ಮುಖಂಡರಿಗೆ ಮತ ಪರಿಷ್ಕರಣೆಗೆ ಸಂಬಂಧಿಸಿದಂತೆ ಉತ್ತಮವಾದ ತರಬೇತಿ ನೀಡುವಂತಾಗ ಬೇಕು. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೇಸ್ ಪಕ್ಷವು ಆಯೋಜಿಸಿದೆ ಇದನ್ನು ಸದ್ಬಳಿಸಿ ಕೊಳ್ಳುವ ಮೂಲಕ ಪ್ರಜಾಪ್ರಭುತ್ವ ನೀಡಿರುವ ಮತದಾನದ ಹಕ್ಕು ಚಲಾಯಿಸಲು ಮತಪಟ್ಟಿಯಲ್ಲಿ ನಮ್ಮಗಳ ಹೆಸರನ್ನು ಪರಿಶೀಲಿಸ ಬೇಕು. ಕೈ ಬಿಟ್ಟವರ ಮತಗಳನ್ನು ಸೇರ್ಪಡೆ ಮಾಡಬೇಕು ಎಂದರು.
ಈಗಾಗಲೇ ಬಿಜೆಪಿ ಪಕ್ಷವು ಚುನಾವಣಾ ಆಯೋಗವನ್ನು ಕೈಗೊಂಬೆಯನ್ನಾಗಿಸಿ ಕೊಂಡು ಮತ ಪರಿಷ್ಕರಣೆ ನೆಪದಲ್ಲಿ ಕಾಂಗ್ರೇಸ್ ಮತಗಳನ್ನು ಕಸಿಯುತ್ತಿರುವ ಹಿನ್ನಲೆಯಲ್ಲಿ ಮಮತ ಬ್ಯಾನರ್ಜಿ ಹಾಗೂ ಸ್ಟಾಲಿನ್ ಅವರುಗಳು ಸೋಲಲು ಕಾರಣವಾಯಿತು ಅದೇ ತಂತ್ರಗಾರಿಕೆಯನ್ನು ಕರ್ನಾಟಕದಲ್ಲೂ ಪ್ರಯೋಗಿಸಲು ಮುಂದಾಗಿದೆ ಅದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸ ಬೇಕಾಗಿದೆ ಹಾಗಾಗಿ ಬಿ.ಎಲ್.ಎ.ಗಳಿಗೆ ತರಭೇತಿ ಮೂಲಕ ಮತ ರಕ್ಷಣೆಗೆ ಮುಂದಾಗ ಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ವಿವರಿಸಿದರು.
ಕೋಲಾರ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ಮಾತನಾಡಿ ಕಾಂಗ್ರೇಸ್ ಪಕ್ಷವು ಒಂದು ಕುಟುಂಬ ಇದ್ದ ಹಾಗೆ ಕಷ್ಟ ಸುಖಗಳನ್ನು ಪಕ್ಷದೊಳಗೆ ಬಗೆಹರಿಸಿ ಕೊಳ್ಳ ಬೇಕು ಎಂದ ಅವರು ಎಸ್.ಐ.ಆರ್. ಕುರಿತು ಪ್ರತಿಯೊಬ್ಬರೂ ಜಾಗೃತರಾಗ ಬೇಕು. ತಮ್ಮ ಮತಗಳನ್ನು ಮತಪಟ್ಟಿಯಲ್ಲಿ ಪರಿಶೀಲಿಸ ಬೇಕು ಅಗತ್ಯವಾಗಿದ್ದಲ್ಲಿ ಪರಿಷ್ಕರಣೆ ಮಾಡಿ ಕೊಳ್ಳ ಬೇಕು ಮತಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದಲ್ಲಿ ಸರ್ಕಾರದಿಂದ ಯಾವೂದೇ ಸೌಲಭ್ಯಗಳು ಸಿಗುವುದಿಲ್ಲ. ಅನ್ನಭಾಗ್ಯ, ವಿದ್ಯುತ್, ಸಾರಿಗೆ, ಗೃಹಲಕ್ಷ್ಮಿ,ಯುವ ನಿಧಿ, ಆಯುಷ್ಮನ್, ಸಾಲಸೌಲಭ್ಯಗಳು ಸೇರಿದಂತೆ ಎಲ್ಲವೂ ಕಳೆದು ಕೊಂಡು ಭಾರತೀಯರು ಎಂಬುವುದನ್ನು ಮರೆತು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಎಚ್ಚರಿಕೆಯ ಸಂದೇಶದ ಅರಿವು ಮತದಾರರಲ್ಲಿ ಮೂಡಿಸ ಬೇಕೆಂದು ಕರೆ ನೀಡಿದರು. ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ ಕಾಂಗ್ರೇಸ್ ಪಕ್ಷಕ್ಕೆ ಎ.ಐ.ಸಿ.ಸಿ. ಕೆ.ಪಿ.ಸಿ.ಸಿ. ಡಿ.ಸಿ.ಸಿ. ಎಂಬುವುದು ಆಧಾರ ಸ್ಥಂಬಗಳಾಗಿದ್ದು ಅವುಗಳಿಗೆ ಹೆಚ್ಚಿನ ಶಕ್ತಿ ತುಂಬಿ ಬಲ ಪಡೆಸುವಂತಾಗ ಬೇಕು. ಮುಂಬರಲಿರುವ ವಿವಿಧ ಚುನಾವಣೆಗಳು ಬರಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದ ಕಾರ್ಯಾಂಗದ ಜೂತೆಗೆ ಶಾಸಕಾಂಗದ ಸಹಕಾರ ಅಗತ್ಯವಿದೆ ಎಂಬುವುದನ್ನು ಸಿದ್ದರಾಮಯ್ಯನವರು ತೋರಿಸಿ ಕೊಡುವ ಮೂಲಕ ರಾಜ್ಯದಲ್ಲಿ ಐತಿಹಾಸಿಕ ಆಡಳಿತ ನೀಡಿದರು ಎಂದು ಶ್ಲಾಘಿಸಿದರು.



























