
ನವಲಗುಂದ,ಜು೮: ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದು ನವಲಗುಂದ ವಿಧಾನಸಭಾ ಕ್ಷೇತ್ರವನ್ನು ಬರಗಾಲವೆಂದು ಘೋಷಣೆ ಮಾಡಬೇಕು ಹಾಗೂ ರೈತರಿಗೆ ೨೦೨೫ ೨೦೨೬ ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಬೇಗನೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ನವಲಗುಂದ ಮಂಡಳದಿAದ ತಹಶೀಲ್ದಾರ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಬಾರಿ ಬೆಳೆ ವಿಮೆಯನ್ನು ರೈತರು ಬ್ಯಾಂಕಿನಲ್ಲಿ ತುಂಬಬೇಕು ಅಥವಾ ಆನ್ಲೆöÊನ್ ಸೆಂಟರ್ ನಲ್ಲಿ ತುಂಬಬೇಕು ಎಂಬ ಗೊಂದಲವನ್ನು ತಕ್ಷಣವೇ ನಿವಾರಣೆ ಮಾಡಿಬೇಕು
ಎಸ್ ಐ ಆರ್ ಪ್ರಕ್ರಿಯೆ ಸರಿಯಾದ ಹಾಗೂ ಪಾರದರ್ಶಕತೆಯಿಂದ ನಡೆಯತ್ತಿಲ್ಲಾ ಸರಿಯಾದ ರೀತಿಯಲ್ಲಿ ಪ್ರಕ್ರಿಯೆ ನಡೆಸಲು ಕ್ರಮ ವಹಿಸಿ ಯಾವುದೇ ಲೋಪ ದೋಷಗಳ ಆಗದಹಾಗ ಸರಿಯಾದ ರೀತಿಯಲ್ಲಿ ನಡೆಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ, ದೇವರಾಜ ದಾಡಿಭಾವಿ, ಷಣ್ಮುಖ ಗುರಿಕಾರ, ಅಂದಾನಯ್ಯ ಹಿರೇಮಠ, ಮಲ್ಲಿಕಾರ್ಜುನ ಸಂಗನಗೌಡ್ರ, ಸಿದ್ದನಗೌಡ ಪಾಟೀಲ, ನಾಗಪ್ಪ ಹರ್ತಿ, ಸಿದ್ದಣ್ಣ ಕಿಟಗೇರಿ ಸೇರಿ ನೂರಾರು ಪದಾಧಿಕಾರಿಗಳು ಇದ್ದರು.































