Home ಜಿಲ್ಲೆ ಪುನಃಶ್ಚೇತನ ತರಬೇತಿ ಕಾರ್ಯಕ್ರಮ

ಪುನಃಶ್ಚೇತನ ತರಬೇತಿ ಕಾರ್ಯಕ್ರಮ

ಗದಗ,ಸೆ೨೩: ತರಬೇತಿ ಪಡೆದ ಪ್ಯಾರಾ ಲೀಗಲ್ ಸ್ವಯಂಸೇವಕರಿಗೆ ಎರಡು ದಿನಗಳ ಪುನಃಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಶ್ರೀಮತಿ ನಾಗವೇಣಿ ರವರು ಚಾಲನೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ (ಗದಗ) ಹಾಗೂ ಔಟ್ಲಾಡ್ ಇಂಡಿಯಾ (ಔuಣ ಟಚಿತಿeಜ Iಟಿಜiಚಿ), ಬೆಂಗಳೂರು ಇವರ ಸಹಯೋಗದೊಂದಿಗೆ ಜಿಲ್ಲಾ ಆವರಣ ಎಡಿಆರ್ ಕಡ್ಡಟದಲ್ಲಿ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರವನ್ನು ಶ್ರೀಮತಿ ನಾಗವೇಣಿ ರವರ ಉದ್ಘಾಟಿಸಿ ಮಾತನಾಡಿ ಜಿಲ್ಲಾ, ತಾಲೂಕು, ಮತ್ತು ಗ್ರಾಮೀಣ ಬಾಗದಲ್ಲಿ ಸ್ವಯಂ ಸೇವಕರಿಗೆ ಸಮುದಾಯ, ಹಲವಾರು ಸವಾಲುಗನ್ನು ಎದುರಿಸಬೆಕಾಗುತ್ತದೆ ಅಂತಹ ಸವಾಲುಗಳ ಕುರಿತು ಎರಡು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಿ ಮತ್ತು ಅವುಗಳಿಗೆ ಯಾವ ರೀತಿ ಎದುರಿಸಬೇಕು ಮತ್ತು ನಮ್ಮ ಸಹಕಾರದ ಅರಿವು ಲಬ್ಯತೆಗಳ ಕುರಿತು ಗಮನಹರಿಸಲು ಸಲಹೆ ನೀಡಿದರು.

ಗದಗ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರು ಎಮ್ ಎ ಸಂಗನಾಳ ಮಾತನಾಡಿ ಎರಡು ದಿನಗಳ ಪುನಃಶ್ಚೇತನ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಕಾನೂನು ಅರಿವು ಮತ್ತು ತಿಳುವಳಿಯನ್ನು ಸರಳವಾಗಿ ತಿಳಿಸುವ ಸಮುದಾಯದ ಬಾಗವಾಗಿ ಸ್ವಯಂ ಸೇವಕರು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸದಸ್ಯ ಕಾರ್ಯದರ್ಶಿ, ಸಿ.ಎಸ್. ಶಿವನಗೌಡ್ರ, ಸಂಪನ್ಮೂಲ ವ್ಯಕ್ತಿ ತರಬೇತುದಾರರು ‘ಔಟ್ಲಾ ಇಂಡಿಯಾ’ ( ಔuಣ ಟಚಿತಿeಜ Iಟಿಜiಚಿ), ಬೆಂಗಳೂರು ಮುಖ್ಯ ಕಾನೂನು ನೆರವು ರಕ್ಷಣಾ ವಕೀಲರು ಜೋಮಿ ಜಾಯ್, ಮುಖ್ಯ ಕಾನೂನು ನೆರವು ರಕ್ಷಣಾ ವಕೀಲರು ಎಸ್.ವಿ. ಗ್ರಾಮ್ಪುರೋಹಿತ್, ಸಹಾಯಕ ಕಾನೂನು ನೆರವು ರಕ್ಷಣಾ ವಕೀಲರು ಗುರುರಾಜ್ ಗೌರಿ, ಸ್ಚಯಂ ಸೇವಾ ಸಹಾಯಕರು ಉಪಸ್ಥಿತರಿದ್ದರು.