Home ಜಿಲ್ಲೆ ಕಲಬುರಗಿ ಪ್ರತಿ ಎಕರೆಗೆ 5 ಸಾವಿರ ರೂ. ಪರಿಹಾರ ನೀಡಿ

ಪ್ರತಿ ಎಕರೆಗೆ 5 ಸಾವಿರ ರೂ. ಪರಿಹಾರ ನೀಡಿ

ಜೇವರಗಿ,ನ.12: ಬರದಿಂದ ತತ್ತರಿಸಿದ ಜೇವರ್ಗಿ ತಾಲೂಕು ರೈತರ ಪ್ರತಿ ಎಕರೆಗೆ 5000 ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಸ ಹೊಸಮನಿ ಹೇಳಿದರು. ತಾಲೂಕಿನ
ಕೋಳಕೂರ ಗ್ರಾಮದಲ್ಲಿ ಬಹಿರಂಗ ಭಾಷಣ ಮಾಡುತ್ತಾ ಅವರು ಈ ವರ್ಷ ಅತ್ಯಂತ ಕೆಟ್ಟ ಬರಗಾಲದ ಪರಸ್ಥಿತಿ ನಿರ್ಮಾಣವಾಗಿದೆ ಬದುಕು ನಡೆಸುವುದಕ್ಕಾಗಿ ದೊಡ್ಡ ನಗರಗಳ ಪ್ರದೇಶಗಳಿಗೆ ಬಾಂಬೆ ಬೆಂಗಳೂರು ಹೈದರಾಬಾದ್ ಇನ್ನಿತರ ದೊಡ್ಡ ಪ್ರದೇಶದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.ಇದರಿಂದ ಬಡ ಜನರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ, ಸಣ್ಣ ಪುಟ್ಟ ಆಸ್ತಿಗಳು ಹಾಗೂ ದನ ಕರುಗಳು ಮಕ್ಕಳ ವಿದ್ಯಾಭ್ಯಾಸ ಹಾಳಾಗಿ ಹೋಗುತ್ತಿದೆ.ಆದ್ದರಿಂದ ಸಾರ್ವಜನಿಕರ ಬಡ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬರಗಾಲ ಕಾಮಗಾರಿ ಪ್ರಾರಂಭ ಮಾಡಬೇಕು ಅಕ್ಕೆ ಗೋದಿ ಜೋಳ ಇನ್ನಿತರ ದವಸಧಾನಗಳನ್ನು ವಿತರಿಸಬೇಕು ದನ ಕರುಗಳಿಗೆ ಗೋಶಾಲೆ ತೆರೆಯಬೇಕು.ಉದ್ಯೋಗ ಖಾತ್ರಿಯ ಕಾಮಗಾರಿಯನ್ನು ಕೆಲಸವನ್ನು ಈಗ ನಿಗದಿಪಡಿಸಿರುವ 125 ದಿನಗಳನ್ನು 200 ದಿನಗಳಿಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಸಿದ್ದಣ್ಣ ಹಂಗರಗಿ ಸಿದ್ದು ಕೋಳ್ ಕೋರ್ ಮಾನಂದ ಮಲ್ಕಪ್ಪ ಹರನೂರ್ ಶ್ರೀಕಾಂತ ದಾಸರ ಇನ್ನೂ ಹಲವಾರು ಮಹಿಳೆಯರು ಪುರುಷರು ಭಾಗವಹಿಸಿದರು