
ಹುಬ್ಬಳ್ಳಿ,ಅ.೧೨: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಿದ್ಯಾನಗರ ಹಾಗೂ ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಅಂಬೇಡ್ಕರ್ ವೃತ್ತದಿಂದ ಕೊಪ್ಪಿಕರ್ ರಸ್ತೆ ವರೆಗೆ “ಮತ ರಕ್ಷಣೆಗಾಗಿ ಬೃಹತ್ ಪ್ರತಿಭಟನಾ ಪಾದಯಾತ್ರೆ” ನಡೆಸಲಾಯಿತು.
ಚುನಾವಣಾ ಆಯೋಗವು (ಇಅI) ಎಸ್ಐಆರ್ (SIಖ) ಪ್ರಕ್ರಿಯೆಯಲ್ಲಿ ಆಡಳಿತಾರೂಢ ಬಿಜೆಪಿ (ಃಎP) ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಬಿಜೆಪಿ, ಜ್ಞಾನೇಶ್ ಕುಮಾರ್, ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಿಕರ್ ರಸ್ತಯಲ್ಲಿ ಪ್ರತಿಭಾನಕಾರನ್ನು ತಡೆದ ಪೊಲೀಸರು ಬಂಧಿಸಿ ಸಿ ಆರ್ ಗ್ರೌಂಡ್ ಗೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಿದರು.
ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮಹಾನಗರ ಘಟಕದ ಅಧ್ಯಕ್ಷ ಸದಾನಂದ ಡಂಗನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಮಾಜಿ ಸಂಸದ ಐ ಜಿ ಸನದಿ, ಶಹಜಾನ್ ಮುಜಾವರ, ಸುವರ್ಣ ಕಲ್ಕುಂಟ್ಲಾ, ಸಂದೀಪ್ ಕುಮಾರ್, ಮೊಹಮ್ಮದ್ ಷರೀಫ್ ಗರ್ಗದ ಸೇರಿದಂತೆ ಕೆಪಿಸಿಸಿ (ಏPಅಅ), ಡಿಸಿಸಿ (ಆಅಅ), ಕಾಂಗ್ರೆಸ್ ಪಕ್ಷದ ವಿವಿಧ ಮುಂಚೂಣಿ ಘಟಕಗಳು, ಸೆಲ್ಗಳು, ಇಲಾಖೆಗಳ ಪದಾಧಿಕಾರಿಗಳು,























