
ಲಕ್ಷೆ÷್ಮÃಶ್ವರ,ಜೂ.೪: ರೈತರಿಗೆ ಸಕಾಲಿಕವಾಗಿ ಮೂಲ ದರದಲ್ಲಿ ಗೊಬ್ಬರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಭಾನು ಮಾರ್ಕೆಟಿನ ಸೋಮೇಶ್ವರ ಪಾದಗಟ್ಟಿಯ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ , ಬಸವರಾಜ್ ಹೊಗೆಸೊಪ್ಪಿನ ತಾಲೂಕ ಘಟಕದ ಅಧ್ಯಕ್ಷರಾದ ಲೋಕೇಶ ಸುತಾರ ಅವರು ಬಿತ್ತನೆಯ ಹಂಗಾಮಿನಲ್ಲಿ ರೈತರಿಗೆ ಗೊಬ್ಬರ ಮಾರಾಟಗಾರರು ಇಲ್ಲ ಎಂದು ಹೇಳಿ ಇಲ್ಲವೇ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಇದರಿಂದಾಗಿ ರೈತರು ಪರಿತಪಿಸುವಂತಾಗಿದೆ.
ಸರ್ಕಾರ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣಿ ಎಂಬAತೆ ಹಾವೇರಿ ಜಿಲ್ಲೆಯ ರೈತರು ಗಲಭೆ ಮಾಡಿದರು ಎಂದು ಅಲ್ಲಿ ಸಾಕಷ್ಟು ಗೊಬ್ಬರವನ್ನು ಪೂರೈಸಲಾಗುತ್ತದೆ ಹಾಗಾದರೆ ನಾವು ಕೂಡ ಗಲಭೆ ಮಾಡಬೇಕೆಂದು ಆಕ್ರೋಶದಿಂದ ಅಧಿಕಾರಿಗಳನ್ನು ಪ್ರಶ್ನಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಕುಮಾರ್ ಕಾಶಪ್ಪನವರ ರೈತ ಸಂಪರ್ಕ ಕೇಂದ್ರದ ಚಂದ್ರಶೇಖರ್ ಗೌಡ ನರಸಮ್ಮನವರ್ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿ ರೈತರಿಗೆ ಮೂಲ ದರದಲ್ಲಿ ಗೊಬ್ಬರ ನೀಡುವಂತೆ ಅಂಗಡಿಕಾರರಿಗೆ ತಾಕೀತು ಮಾಡಿ ಸ್ಥಳದಲ್ಲಿಯೇ ಗೊಬ್ಬರ ವಿತರಣೆಗೆ ವ್ಯವಸ್ಥೆ ಮಾಡಲಾಯಿತು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಇನ್ನು ಮುಂದೆ ಅಂಗಡಿಕಾರರು ಸರ್ಕಾರ ನಿಗದಿಪಡಿಸಿದ ದರಗಳ ನಾಮಫಲಕವನ್ನು ಹಾಕಬೇಕು ನಕಲಿ ಬಿಲ್ ನೀಡಿ ರೈತರಿಂದ ಹಣ ವಸೂಲಿ ಮಾಡಿದ ಅಂಗಡೀಕಾರರ ಮೇಲೆ ಕ್ರಮ ಕೈಗೊಳ್ಳಬೇಕು ಏಳು ದಿನಗಳೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ಸ್ಥಳಕ್ಕೆ ಆಗಮಿಸಿದ ಗ್ರೇಡ್ ೨ ತಹಶೀಲ್ದಾರ್ ಮಂಜುನಾಥ ಅಮಾಸಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರವೀಣ್ ಗಾಣಿಗೇರ ಬಸವರಾಜ ಮಲ್ಲೂರು ಅರುಣ್ ಮೆಕ್ಕೆ ಗಂಗಾಧರ ಕರಜ ಕಣ್ಣವರ ಗಂಗಾಧರ್ , ಕೊಂಚಿಗೇರಿ ಮಠ ಮಂಜುನಾಥ್ ಕೂಡಳ್ಳಿ ಫಕೀರೇಶ ಅಣ್ಣಿಗೇರಿ ಸಾವಿತ್ರಿ ಅತ್ತಿಗೆರೆ ಹುಲಿಗೆಮ್ಮ ಮೇವುಂಡಿ ಜಯಮ್ಮ ತುಪ್ಪದ ರೇಷ್ಮಾ ಜಾದವ್ ಚನ್ನಬಸಯ್ಯ ಗಡ್ಡದೇವರ ಮಠ ಮುಂತಾದವರು ಇದ್ದರು.
ಪಿಎಸ್‌ಐ ನಾಗರಾಜ್ ಗಡದ ಜಿಕೆ ರಾಠೋಡ್ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.























