Home ಜಿಲ್ಲೆ ನೀರಿನ ಪೋಲು ತಪ್ಪಿಸಿ

ನೀರಿನ ಪೋಲು ತಪ್ಪಿಸಿ


ನವಲಗುಂದ,ಅ.೧೪: ಸಾರ್ವಜನಿಕರು ಅನಾವಶ್ಯಕವಾಗಿ ನೀರನ್ನು ಪೋಲು ಮಾಡುವುದು ತಪ್ಪಿಸಬೇಕು ಜೊತೆಗೆ ನಳಗಳು ಸೋರದಂತೆ ವ್ಯವಸ್ಥಿತವಾಗಿ ಹಾಗೂ ನೀರನ್ನು ಮಿತವಾಗಿ ಬಳಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಓ ಭುವನೇಶ ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿದರು.


ತಾಲ್ಲೂಕಿನ ನಾಯಕನೂರ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಗ್ರಾಮೀಣಾಭಿರುದ್ಧಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದ ಶುಚಿತ್ವ ಹಾಗೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕೆಂದು ಮೇಲ್ವಿಚಾರಕರಿಗೆ ತಿಳಿಸಿದರು. ನಂತರ ಗ್ರಾಮ ಪಂಚಾಯತಿಯ ಅರಿವು ಕೇಂದ್ರ ಸೇರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.


ತಾ ಪಂ ಇಓ ರವೀಂದ್ರಗೌಡ ಪಾಟೀಲ, ಸಹಾಯಕ ನಿರ್ದೇಶಕರು (ಗ್ರಾ. ಉ.) ಜಗದೀಶ ಹಡಪದ, ಸಿಡಿಪಿಒ ಗಾಯತ್ರಿದೇವಿ ಪಾಟೀಲ, ಎಸ್ ಎಸ್ ಲಂಗೋಟಿ, ಎಮ್ ಎಮ್ ರಗಟಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.