
ಗದಗ, ಅ.೧೦: ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ ಯುವ ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಂಸದೀಯ ನಡವಳಿಕೆ, ವಿಧಾನಸಭೆ ಮತ್ತು ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಸ್ಪಷ್ಟ ಅರಿವು ಇರಬೇಕು. ಯಾವುದೇ ರೀತಿಯ ತಾರತಮ್ಯಕ್ಕೆ ಆಸ್ಪದ ನೀಡದೆ, ಪಾರದರ್ಶಕವಾಗಿ ಚೀಟಿ ಎತ್ತುವ ಮೂಲಕವೇ ಪ್ರಮುಖ ಪಾತ್ರಗಳನ್ನು (ಆಡಳಿತ ಪಕ್ಷ, ವಿರೋಧ ಪಕ್ಷ, ಮಾರ್ಷಲ್ ಇತ್ಯಾದಿ) ಹಂಚಿಕೆ ಮಾಡಬೇಕು. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಸಿಗುತ್ತದೆ” ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಪೂರ್ವ ಸಿದ್ಧತೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಪ್ರಸ್ತುತಿ, ವಿಷಯ ಮಂಡನೆ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ನಿಖರವಾಗಿ ಮೌಲ್ಯಮಾಪನ ಮಾಡಲು ಉಪನ್ಯಾಸಕರು ಹಾಗೂ ಸಮಿತಿಯ ಸದಸ್ಯರನ್ನೊಳಗೊಂಡ ತಜ್ಞರ ಮೌಲ್ಯಮಾಪನ ತಂಡವನ್ನು ರಚಿಸಬೇಕು. ಈ ತಂಡವು ಕಲಾಪವನ್ನು ನಿಗಾವಹಿಸಿ ಅತ್ಯುತ್ತಮವಾಗಿ ಪ್ರದರ್ಶನ ನೀಡುವ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದಿಂದ ಮುಂದಿನ ಹಂತಕ್ಕೆ ಆಯ್ಕೆ ಮಾಡಲಿದೆ” ಎಂದರು.
ಅದಲ್ಲದೆ, “ನೈಜ ಶಾಸಕರಂತೆ ವಿದ್ಯಾರ್ಥಿಗಳು ಕಲಾಪದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಮುಂಚಿತವಾಗಿಯೇ ಸೂಕ್ತ ತರಬೇತಿ ಹಾಗೂ ‘ಅಭ್ಯಾಸ ಕಲಾಪ’ ನಡೆಸುವುದು ಅತ್ಯಗತ್ಯ. ಚರ್ಚೆಗೆ ನೀಡುವ ವಿಷಯಗಳು ವಿದ್ಯಾರ್ಥಿಗಳ ವಯಸ್ಸಿಗೆ ಹಾಗೂ ಜ್ಞಾನಕ್ಕೆ ಸೂಕ್ತವಾಗಿರಬೇಕು” ಎಂದರು.
ಪಾರದರ್ಶಕ ಪಾತ್ರ ಹಂಚಿಕೆ : ವಿದ್ಯಾರ್ಥಿಗಳನ್ನು ಲಾಟರಿ/ಚೀಟಿ ಎತ್ತುವ ಮೂಲಕ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಾಗಿ ವಿಂಗಡಿಸುವುದು.
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರೇ ಚರ್ಚಿಸಿ ತಮ್ಮ ನಾಯಕರನ್ನು (ಸಿಎಂ, ವಿರೋಧ ಪಕ್ಷದ ನಾಯಕ ಇತ್ಯಾದಿ) ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿಕೊಳ್ಳುವುದು ಎಂದು ನಿರ್ದೇಶನ ನೀಡಿದರು.
ಕಲಾಪದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯ ವಿಷಯ ಮಂಡನೆ, ಹಾವಭಾವ ಹಾಗೂ ಸಕ್ರಿಯತೆಯನ್ನು ಗಮನಿಸಿ ಅಂಕ ನೀಡಲು ತಜ್ಞ ಉಪನ್ಯಾಸಕರು ಮತ್ತು ಸಮಿತಿ ಸದಸ್ಯರನ್ನೊಳಗೊಂಡ ವಿಶೇಷ ಮೌಲ್ಯಮಾಪನ ತಂಡವನ್ನು ರಚಿಸಲಾಗುತ್ತದೆ ಎಂದು ಹೇಳಿದರು.
ಅಂತಿಮ ಕಾರ್ಯಕ್ರಮಕ್ಕೂ ಮುನ್ನ ಓರಿಯಂಟೇಶನ್ ತರಬೇತಿ ಮತ್ತು ಅಭ್ಯಾಸ ಕಲಾಪಗಳನ್ನು ನಡೆಸಲಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ನೀತಿ ಹಾಗೂ ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸಲು ವಿವಾದಾತ್ಮಕವಲ್ಲದ ಪ್ರಚಲಿತ ವಿಷಯಗಳನ್ನು ಚರ್ಚೆಗೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಅವರು ಮಾತನಾಡಿ, “ಯುವ ಸಂಸತ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿ, ಡಿಗ್ರಿ, ಸ್ನಾತಕೋತ್ತರ ಹಾಗೂ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನೈಜ ವಿಧಾನ ಸೌಧದ ವಾತಾವರಣವನ್ನು ಮರುಸೃಷ್ಟಿಸಲು ಸೂಕ್ತವಾದ ಸಭಾಂಗಣ, ಸ್ಪೀಕರ್ ಆಸನ, ಮಾಧ್ಯಮ ಗ್ಯಾಲರಿ ಹಾಗೂ ಪ್ರೇಕ್ಷಕರ ಗ್ಯಾಲರಿಗಳನ್ನು ವ್ಯವಸ್ಥೆಗೊಳಿಸಲಾಗುವುದು” ಎಂದು ಸಭೆಯಲ್ಲಿ ತಿಳಿಸಿದರು.
ನ್ಯಾಯವಾದಿ ಗುರುರಾಜ ಅವರು ಮಾತನಾಡಿ, ಯುವ ಸಂಸತ್ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶಾಸನ ರಚನೆ, ಜೀರೋ ಅವರ್ (ಶೂನ್ಯ ವೇಳೆ) ಹಾಗೂ ಸಂಸದೀಯ ನಿಯಮಗಳ ಕುರಿತು ನೀಡಬೇಕಾದ ಪೂರ್ವ ತರಬೇತಿಯ ಅಗತ್ಯತೆಯನ್ನು ಹಂಚಿಕೊAಡರು.
ಯಾವುದೇ ವಿದ್ಯಾರ್ಥಿಗೆ ನೇರವಾಗಿ ಪ್ರಮುಖ ಪಾತ್ರಗಳನ್ನು (ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಸ್ಪೀಕರ್ ಇತ್ಯಾದಿ) ನೀಡದೆ, ಚೀಟಿ ಎತ್ತುವ ಮೂಲಕ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳನ್ನು ವಿಂಗಡಿಸುವುದು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರೇ ಚರ್ಚಿಸಿ ತಮ್ಮ ನಾಯಕರನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವುದು ಎಂದರು.
ವಿದ್ಯಾರ್ಥಿಗಳ ಪ್ರಾತಿನಿಧ್ಯತೆಯಲ್ಲಿ ಶಾಲಾ ಹಂತದಲ್ಲಿ (೮-೧೦%), ಪ್ರೌಢಶಾಲೆ (೧೦-೧೫%), ಪದವಿ ವಿದ್ಯಾರ್ಥಿಗಳು (೫೦-೬೦%) ಹಾಗೂ ಕಾನೂನು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ (೨೫-೩೦%) ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಗದಿತ ಅನುಪಾತದಲ್ಲಿ ಅವಕಾಶ ನೀಡಲಾಗುವುದು. ವಿಧಾನ ಸೌಧದ ಕಲಾಪದ ಮಾದರಿಯಲ್ಲೇ ಸ್ಪೀಕರ್ ಪೀಠ, ಆಡಳಿತ-ವಿರೋಧ ಪಕ್ಷಗಳ ಆಸನ ವ್ಯವಸ್ಥೆ, ಮಾರ್ಷಲ್ಗಳು, ಸಚಿವಾಲಯದ ಸಿಬ್ಬಂದಿ, ಮಾಧ್ಯಮ ಗ್ಯಾಲರಿ ಹಾಗೂ ಸಾರ್ವಜನಿಕ ಪ್ರೇಕ್ಷಕರ ಗ್ಯಾಲರಿಯನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಹೇಳಿದರು.
ತರಬೇತಿ ಮತ್ತು ವಿಷಯಗಳು ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಸಂಸದೀಯ ನಡಾವಳಿ ಹಾಗೂ ಜೀರೋ ಅವರ್ ಕುರಿತು ತರಬೇತಿ ನೀಡಲಾಗುವುದು. ರಿಹರ್ಸಲ್ ಮತ್ತು ಅಂತಿಮ ದಿನದ ಕಲಾಪಕ್ಕೆ ಬೇರೆ ಬೇರೆ ಪ್ರಚಲಿತ ವಿಷಯಗಳನ್ನು (ಉದಾ: ಪರಿಸರ ಸಂರಕ್ಷಣೆ, ಡಿಜಿಟಲ್ ಗೌಪ್ಯತೆ/ಸೈಬರ್ ಭದ್ರತೆ, ಅಭಿವೃದ್ಧಿ ಯೋಜನೆಗಳು, ಕೃತಕ ಬುದ್ದಿಮತ್ತೆ ಇತ್ಯಾದಿ ) ಚರ್ಚೆಗೆ ನಿಗದಿಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶ್ರೀಮತಿ ಡಾ. ನಂದಾ ಹಣಬರಹಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್. ಎಸ್. ಬುರಡಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾಸನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.























