Home ಜಿಲ್ಲೆ ಕಲಬುರಗಿ 2300 ಕಿ.ಮೀ ಪಾದಯಾತ್ರೆಗೆ ಸಿದ್ಧತೆ

2300 ಕಿ.ಮೀ ಪಾದಯಾತ್ರೆಗೆ ಸಿದ್ಧತೆ

ಕಲಬುರಗಿ,ನ.18: ಜಿಲ್ಲೆಯ ಜೇವರಗಿ ತಾಲೂಕಿನ ಹಿಪ್ಪರಗಾ ಎಸ್.ಎನ್ ಗ್ರಾಮದ ಶ್ರೀಗೌರಿ ಶಂಕರ ದೇವಸ್ಥಾನದ ಅಧ್ಯಕ್ಷ ಮಡಿವಾಳಪ್ಪಗೌಡ ಮಾಲಿಪಾಟೀಲ ಅವರು ಪ್ರತಿ ವರ್ಷದಂತೆ ಈ ವರ್ಷವೂ ಮುಂಬರುವ ಜನೆವರಿ ಮೊದಲ ವಾರದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಈ ಬಾರಿ ಓರಿಸ್ಸಾ ರಾಜ್ಯದ ಪುರಿ ಜಗನ್ನಾಥ, ಪಶ್ಚಿಮ ಬಂಗಾಳ ರಾಜ್ಯ ಕೋಲ್ಕತ್ತಾದ ಕಾಳಿಕಾದೇವಿ, ಜಾರ್ಖಂಡ ರಾಜ್ಯದ ದೇವಗಡದ ವೈದ್ಯನಾಥ ಜ್ಯೋತಿರ್ಲಿಂಗ ಹೀಗೆ ಒಂದು ಧಾಮ, ಒಂದು ಶಕ್ತಿ ಪೀಠ ಹಾಗೂ ಒಂದು ಜ್ಯೋತಿರ್ಲಿಂಗ ದರ್ಶನಕ್ಕೆ ತೆರಳುವರು. ಈಗಾಗಲೇ ಇವರೊಂದಿಗೆ ಆರು ಜನರು ಪಾದಯಾತ್ರೆಗೆ ತೆರಳಲು ಸಜ್ಜಾಗಿದ್ದಾರೆ. ಈ ಪಾದಯಾತ್ರೆಯು ಸುಮಾರು 2300 ಕಿ.ಮೀ ದೂರವಿದ್ದು ಅಂದಾಜು ಎರಡು ತಿಂಗಳಲ್ಲಿ ಪಾದಯಾತ್ರೆ ಸಂಪನ್ನಗೊಳ್ಳುವದು.
ಮಡಿವಾಳಪ್ಪ ಗೌಡರು ಈಗಾಗಲೇ ಪಾದಯಾತ್ರೆ ಮೂಲಕವೇ 12 ಜ್ಯೋತಿರ್ಲಿಂಗ ದರ್ಶನ ಪಡೆದಿದ್ದಾರೆ. ಹಾಗೂ ಇಲ್ಲಿಯವರೆಗೆ 398 ದಿನಗಳಲ್ಲಿ 13850 ಕಿ.ಮೀ ಪಾದಯಾತ್ರೆ ( ನಿರಂತರವಲ್ಲ) ಮಾಡಿರುವರು.ಇವರೊಂದಿಗೆ ಪಾದಯಾತ್ರೆ ತೆರಳುವ ಆಸಕ್ತ ಭಕ್ತರು ಅವರನ್ನು ಸಂಪರ್ಕಿಸಬಹುದು( ಮೊ.ನಂ.9980741119) ಎಂದು ಗುರುರಾಜ.ಕೆ.ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.