Home ಜಿಲ್ಲೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ


ನವಲಗುಂದ,ನ.೧೯: ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಪ್ರತಿಭೆಯನ್ನ ಅನಾವರಣಗೊಳಿಸುವುದಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಗಣೇಶ ಹೊಳೆಯಣ್ಣವರ ಹೇಳಿದರು.
ತಾಲ್ಲೂಕಿನ ಅಳಗವಾಡಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಜಾವೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಎಸ್ ಡಿ ಎಂ ಸಿ ಅಧ್ಯಕ್ಷ ಸಣ್ಣಲಿಂಗಪ್ಪ ಕಂಬಳಿ ಅಧ್ಯಕ್ಷತೆ ವಹಿಸಿದ್ದರು, ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ್ ಕಂಬೋಗಿ ಎಲ್ಲಾ ಮಕ್ಕಳಿಗೂ ಶುಭಕೋರಿದರು
ದೈಹಿಕ ಶಿಕ್ಷಣ ಪರಿವೀಕ್ಷಕ ಧರಿಯನ್ನವರ, ಯುವ ಮುಖಂಡ ಹರೀಶ ಕನಕರಡ್ಡಿ, ನೌಕರ ಸಂಘದ ಅಧ್ಯಕ್ಷ ವ್ಹಿ. ಡಿ.ರಂಗಣ್ಣವರ, ಪಿ ಸಿ ಸೂರಪ್ಪನವರ, ಶಾಲೆ ಪ್ರಧಾನ ಗುರುಗಳಾದ ಬಿ ಎಸ್ ಆಡಿನ, ಬಿ ಎಂ ಎಲಿಗಾರ, ವೆಂಕಟೇಶ ಭಜಂತ್ರಿ, ಎಚ್‌ಎಮ್ ಗುರಾಣಿ, ಸಲೀಂ ಮಕಾನದಾರ, ಮುತಾಲಿ ದೇಸಾಯಿ, ಈರಣ್ಣ ಇಳಿಗೇರ ಹಾಗೂ ಎಸ್ ಡಿ ಎಮ್ ಸಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು